ನೇಪಾಳ: ಭಾರತದ ನೆರವಿನ ಜಲವಿದ್ಯುತ್ ಯೋಜನೆ ಉದ್ಘಾಟನೆ
Update: 2021-05-06 21:55 IST
ಕಠ್ಮಂಡು (ನೇಪಾಳ), ಮೇ 6: ನೇಪಾಳದ ಜುಮ್ಲಾ ಜಿಲ್ಲೆಯ ಚಂದನಾತ್ ಪಟ್ಟಣದಲ್ಲಿ ಭಾರತದ ನೆರವಿನೊಂದಿಗೆ ಪುನರ್ನಿರ್ಮಿಸಲಾದ ಸಣ್ಣ ಜಲವಿದ್ಯುತ್ ಸ್ಥಾವರವನ್ನು ಬುಧವಾರ ಆನ್‌ಲೈನ್ ಮೂಲಕ ಉದ್ಘಾಟಿಸಲಾಯಿತು ಎಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಈ ಜಲವಿದ್ಯುತ್ ಸ್ಥಾವರಕ್ಕೆ ಭಾರತ 2.64 ಕೋಟಿ ನೇಪಾಳಿ ರೂಪಾಯಿ (ಸುಮಾರು 1.65 ಕೋಟಿ ಭಾರತೀಯ ರೂಪಾಯಿ) ನೆರವು ನೀಡಿದೆ.
ಜುಮ್ಲಾ ಜಿಲ್ಲೆಯ ಚಂದನಾತ್ ಪಟ್ಟಣದಲ್ಲಿ ಭಾರತದ ನೆರವಿನೊಂದಿಗೆ ಪುನರ್ನಿರ್ಮಿಸಲಾಗಿರುವ ಸಣ್ಣ ಜಲವಿದ್ಯುತ್ ಸ್ಥಾವರವನ್ನು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಪ್ರಥಮ ಕಾರ್ಯದರ್ಶಿಯಾಗಿರುವ ಕರುಣ್ ಬನ್ಸಾಲ್ ಆನ್‌ಲೈನ್‌ನಲ್ಲಿ ಉದ್ಘಾಟಿಸಿದರು ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.