ನೇಪಾಳ: ಬಹುಮತ ಕಳೆದುಕೊಂಡ ಪ್ರಧಾನಿ ಕೆ.ಪಿ. ಶರ್ಮ ಒಲಿ ಸರಕಾರ

Update: 2021-05-06 16:28 GMT

ಕಠ್ಮಂಡು (ನೇಪಾಳ), ಮೇ 6: ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಪುಷ್ಪಕಮಲ್ ದಹಲ್ ಪ್ರಚಂಡ ನೇತೃತ್ವದ ಸಿಪಿಎನ್ (ಮಾವೋಯಿಸ್ಟ್ ಸೆಂಟರ್) ಅಧಿಕೃತವಾಗಿ ಹಿಂದಕ್ಕೆ ಪಡೆದ ಬಳಿಕ, ಸರಕಾರ ಬುಧವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಕಳೆದುಕೊಂಡಿದೆ.

ಸಿಪಿಎನ್ (ಮಾವೋಯಿಸ್ಟ್ ಸೆಂಟರ್) ಇದಕ್ಕೆ ಸಂಬಂಧಿಸಿದ ಪತ್ರವೊಂದನ್ನು ಸಂಸತ್ ಕಾರ್ಯಾಲಯಕ್ಕೆ ಸಲ್ಲಿಸಿದೆ ಎಂದು ಪಕ್ಷದ ಹಿರಿಯ ನಾಯಕ ಗಣೇಶ್ ಶಾ ತಿಳಿಸಿದರು.

ಮಾವೋಯಿಸ್ಟ್ ಸೆಂಟರ್‌ನ ಮುಖ್ಯಸ್ಥ ಚೇತಕ ದೇವ್ ಗುರುಂಗ್ ಪತ್ರವನ್ನು ಸಂಸತ್ ಕಾರ್ಯಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು ಎಂದು ಅವರು ಹೇಳಿದರು.

ಕೆ.ಪಿ. ಶರ್ಮ ಒಲಿ ಸರಕಾರವು ಸಂವಿಧಾನವನ್ನು ಉಲ್ಲಂಸಿಘಿದೆ ಹಾಗೂ ಸರಕಾರದ ಇತ್ತೀಚಿನ ಚಟುವಟಿಕೆಗಳು ಪ್ರಜಾಸತ್ತಾತ್ಮಕ ವಿಧಿವಿಧಾನಗಳು ಮತ್ತು ರಾಷ್ಟ್ರೀಯ ಸಾರ್ವಭೌಮತೆಗೆ ಬೆದರಿಕೆಯಾಗಿವೆ ಎಂದು ಪತ್ರವನ್ನು ಸಂಸತ್ ಕಾರ್ಯಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವ್ ಗುರುಂಗ್ ಹೇಳಿದರು. ಹಾಗಾಗಿ, ಸರಕಾರಕ್ಕೆ ನೀಡಲಾಗಿದ್ದ ಬೆಂಬಲವನ್ನು ಹಿಂದಕ್ಕೆ ಪಡೆಯಲು ಪಕ್ಷ ನಿರ್ಧರಿಸಿತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News