ಚೀನಾದ ರಾಕೆಟ್ ನಾಳೆ ಭೂಮಿಯ ಮೇಲೆ ಬೀಳುವ ಸಾಧ್ಯತೆ: ಪೆಂಟಗನ್

Update: 2021-05-06 17:22 GMT

ವಾಶಿಂಗ್ಟನ್, ಮೇ 6: ಸ್ಥಿರತೆ ಕಳೆದುಕೊಂಡಿರುವ ಚೀನಾದ ರಾಕೆಟೊಂದು ತನ್ನ ಕಕ್ಷೆಯಿಂದ ಹೊರಬಿದ್ದು ಶನಿವಾರ ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವ ನಿರೀಕ್ಷೆಯಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ. ಆದರೆ, ಅದರ ಅವಶೇಷಗಳು ಎಲ್ಲಿ ಬೀಳಬಹುದು ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ಲಾಂಗ್ ಮಾರ್ಚ್ 5ಬಿ ರಾಕೆಟ್‌ನ ಪಥದ ಬಗ್ಗೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ಪೆಂಟಗನ್ ವಕ್ತಾರ ಜಾನ್ ಕರ್ಬಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಈ ರಾಕೆಟ್ ಚೀನಾದ ಮೊದಲ ಬಾಹ್ಯಾಕಾಶ ನಿಲ್ದಾಣದ ಒಂದು ಮೋಡ್ಯೂಲನ್ನು ಕಳೆದ ತಿಂಗಳು ಯಶಸ್ವಿಯಾಗಿ ಕಕ್ಷೆಯಲ್ಲಿರಿಸಿತ್ತು.

ಇತರ ರಾಕೆಟ್‌ಗಳು ಬಾಹ್ಯಾಕಾಶ ಕಾಯಗಳನ್ನು ಕಕ್ಷೆಯಲ್ಲಿ ಇರಿಸಿದ ಬಳಿಕ ತಕ್ಷಣ ನಿಗದಿಪಡಿಸಿದ ಸ್ಥಳದಲ್ಲಿ ಭೂಮಿಗೆ ಮರಳುತ್ತವೆ. ಆದರೆ, ಚೀನಾದ ಈ ರಾಕೆಟ್ ಬಾಹ್ಯಾಕಾಶ ಮೋಡ್ಯೂಲ್ ಜೊತೆಗೆ ಕಕ್ಷೆಯನ್ನು ಸೇರಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News