ಕಠಿಣ ಕ್ರಮಗಳಿಂದ ಕೊರೋನ 3ನೇ ಅಲೆ ತಪ್ಪಿಸಬಹುದು: ಡಾ. ವಿಜಯ ರಾಘವನ್

Update: 2021-05-07 18:33 GMT

ಹೊಸದಿಲ್ಲಿ, ಮೇ 7: ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಕೊರೋನದ ಮಾರಣಾಂತಿಕ ಮೂರನೇ ಅಲೆ ತಪ್ಪಿಸಬಹುದು ಎಂದು ಕೇಂದ್ರ ಸರಕಾರದ 

ಪ್ರಾಥಮಿಕ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ ರಾಘವನ್ ಶುಕ್ರವಾರ ಹೇಳಿದ್ದಾರೆ.

‘‘ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಮೂರನೇ ಅಲೆ ಎಲ್ಲಿಯೂ ಸಂಭವಿಸದು. ಸ್ಥಳೀಯ ಮಟ್ಟದಲ್ಲಿ, ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಹಾಗೂ ನಗರಗಳಲ್ಲಿ 

ಹಾಗೂ ಎಲ್ಲೆಡೆ ಅನುಷ್ಠಾನಗೊಳಿಸಲಾದ ಪರಿಣಾಮ ಮಾರ್ಗಸೂಚಿಯನ್ನು ಇದು ಅವಲಂಬಿಸಿದೆ’’ ಎಂದು ಡಾ. ವಿಜಯ ರಾಘವನ್ ಹೇಳಿದ್ದಾರೆ.

ಕೊರೋನ ಮೂರನೇ ಅಲೆಗೆ ದೇಶ ಸಿದ್ಧವಾಗಬೇಕು ಎಂದು ಡಾ. ವಿಜಯ ರಾಘವನ್ ಬುಧವಾರ ಬೆಳಗ್ಗೆ ಹೇಳಿದ್ದರು.

‘‘ವೈರಸ್ ಅತ್ಯಧಿಕ ಮಟ್ಟದಲ್ಲಿ ಹರಡುವ ಮೂರನೇ ಅಲೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ, ಈ ಮೂರನೇ ಅಲೆ ಯಾವ ಸಂದರ್ಭ ಸಂಭವಿಸಲಿದೆ 

ಎಂಬುದು ಸ್ಪಷ್ಟವಿಲ್ಲ. ಹೊಸ ಅಲೆಗೆ ನಾವು ಸಿದ್ಧರಾಗಬೇಕು’’ ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News