ಕೋವಿಡ್ ಲಸಿಕೆಗಳ ಮೇಲಿನ ಪೇಟೆಂಟ್ ಮನ್ನಾ ನಿರ್ಧಾರಕ್ಕೆ ಜರ್ಮನಿ ಪ್ರಬಲ ವಿರೋಧ

Update: 2021-05-07 18:49 GMT

ಬರ್ಲಿನ್ (ಜರ್ಮನಿ), ಮೇ 7: ಕೊರೋನ ವೈರಸ್ ಲಸಿಕೆಗಳ ಮೇಲಿನ ಪೇಟೆಂಟ್ಗಳನ್ನು ಮನ್ನಾ ಮಾಡುವ ಅಮೆರಿಕದ ದಿಟ್ಟ ನಿರ್ಧಾರವನ್ನು ಜರ್ಮನಿಯು ಗುರುವಾರ ಬಲವಾಗಿ ವಿರೋಧಿಸಿದೆ. ಇದರೊಂದಿಗೆ ಈ ಪ್ರಸ್ತಾವವು ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳನ್ನು ಅನಿಶ್ಚಿತತೆ ಆವರಿಸಿದೆ. ಯಾಕೆಂದರೆ, ಈ ಪ್ರಸ್ತಾವವು ಅಂಗೀಕಾರಗೊಳ್ಳಬೇಕಾದರೆ ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ದೇಶಗಳ ನಡುವೆ ಒಮ್ಮತ ಏರ್ಪಡುವುದು ಅಗತ್ಯವಾಗಿದೆ.

ಅಭಿವೃದ್ಧಿಶೀಲ ದೇಶಗಳಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಅಗಾಧವಾಗಿ ಏರುತ್ತಿರುವಾಗ, ಬಡ ದೇಶಗಳಿಗೆ ಇನ್ನೂ ಲಸಿಕೆ ಅಭಿಯಾನವನ್ನು ಆರಂಭಿಸಲು ಸಾಧ್ಯವಾಗಿಲ್ಲ. ಆದರೆ ಶ್ರೀಮಂತ ದೇಶಗಳು ಕೊರೋನ ವೈರಸ್ ಲಸಿಕೆಗಳನ್ನು ದಾಸ್ತಾನಿರಿಸಿಕೊಂಡಿವೆ ಎಂಬ ಆರೋಪಗಳನ್ನು ಎದುರಿಸುತ್ತಿವೆ.

ಲಸಿಕೆಗಳ ಮೇಲಿನ ಪೇಟೆಂಟ್ಗಳನ್ನು ರದ್ದುಪಡಿಸಬೇಕೆಂಬ ಅಗಾಧಒತ್ತಡಕ್ಕೆ ಸಿಲುಕಿದ ಅಮೆರಿಕ, ಈ ಪ್ರಸ್ತಾವವನ್ನು ಬೆಂಬಲಿಸುವುದಾಗಿ ಬುಧವಾರ ಹೇಳಿತ್ತು. ಈ ಸಂಬಂಧ ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾತರೀನ್ಟಾಯ್ ಹೇಳಿಕೆ ನೀಡಿದ್ದರು.

ಐರೋಪ್ಯಕಮಿಶನ್ ಅಧ್ಯಕ್ಷಉರ್ಸುಲಾ ವೊನ್ಡೆರ್ ಲೆಯೆನ್ಆರಂಭದಲ್ಲಿ ಹಿಂಜರಿಕೆ ವ್ಯಕ್ತಪಡಿಸಿದ್ದರೂ, ಬಳಿಕ ಈ ಪಸ್ತಾವದ ಬಗ್ಗೆ ಚರ್ಚಿಸಲು ಐರೋಪ್ಯಒಕ್ಕೂಟ ಸಿದ್ಧವಾಗಿದೆ ಎಂದಿದ್ದರು.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಕೂಡ ಈ ಪ್ರಸ್ತಾವಕ್ಕೆ ಬೆಂಬಲ ನೀಡಿದ್ದರು. ಆದರೆ, ಈಗ ಜರ್ಮನಿ ಈ ಪ್ರಸ್ತಾವಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿರುವುದು ಪ್ರಸ್ತಾವದ ಯಶಸ್ಸಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯೊಂದು ಎದುರಾಗಿದೆ.

‘‘ಬೌದ್ಧಿಕ ಆಸ್ತಿಯ ರಕ್ಷಣೆಯು ಹೊಸತನದ ಮೂಲವಾಗಿದೆ ಹಾಗೂ ಅದು ಭವಿಷ್ಯದಲ್ಲೂ ಹಾಗೆ ಮುಂದುವರಿಯಬೇಕು’’ ಎಂದುಜರ್ಮನಿಯಚಾನ್ಸಲರ್ಆ್ಯಂಜೆಲಾ ಮರ್ಕೆಲ್ರ ವಕ್ತಾರೆಯೊಬ್ಬರು ಹೇಳಿದರು.

ವಿರೋಧಿಸುತ್ತೇವೆ: ಫೈಝರ್ ಸಿಇಒ

ಕೋವಿಡ್-19 ಲಸಿಕೆಗಳ ಮೇಲಿನ ಪೇಟೆಂಟ್ಗಳನ್ನು ರದ್ದುಪಡಿಸಬೇಕೆಂಬ ಅಮೆರಿಕ ಬೆಂಬಲಿತ ಪ್ರಸ್ತಾವವನ್ನು ನಾನು ವಿರೋಧಿಸುತ್ತೇನೆಎಂದು ಅಮೆರಿಕದ ಔಷಧ ತಯಾರಿಕಾ ಕಂಪೆನಿ ಫೈಝರ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ)ಆಲ್ಬರ್ಟ್ ಬೋರ್ಲಾ ಗುರುವಾರ ಹೇಳಿದ್ದಾರೆ. ಇದಕ್ಕೆ ಬದಲಾಗಿ, ಈಗ ಲಸಿಕೆಗಳು ತಯಾರಾಗುತ್ತಿರುವ ಸ್ಥಳಗಳಲ್ಲೇ ಅವುಗಳ ಉತ್ಪಾದನೆಯನ್ನು ವೃದ್ಧಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಫೈಝರ್ ಮತ್ತು ಜರ್ಮನಿಯ ಬಯೋಎನ್ಟೆಕ್ ಕಂಪೆನಿಗಳು ಜಂಟಿಯಾಗಿ ಕೊರೋನ ವೈರಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ.

‘‘ಕೊರೋನ ವೈರಸ್ ಲಸಿಕೆಗಳ ಪೇಟೆಂಟ್ರಕ್ಷಣೆಯನು ್ನರದ್ದುಪಡಿಸಬೇಕೆಂಬ ಅಮೆರಿಕದ ಕರೆಯನ್ನು ನನ್ನ ಕಂಪೆನಿ ಖಂಡಿತವಾಗಿಯೂ ಬೆಂಬಲಿಸುವುದಿಲ್ಲ’’ ಎಂದುಎಎಫ್ಪಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಬೋರ್ಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News