ಸೌದಿ ಕಳಿಸಿದ ಆಕ್ಸಿಜನ್ ಗೆ ರಿಲಯನ್ಸ್ ಸ್ಟಿಕ್ಕರ್ ಅಂಟಿಸಿ ಪ್ರಚಾರ ಪಡೆಯುತ್ತಿದೆ ಎಂಬುದು ಸುಳ್ಳು ಸುದ್ದಿ

Update: 2021-05-08 05:30 GMT
Photo: thequint.com

ಆಕ್ಸಿಜನ್ ಟ್ಯಾಂಕರ್ ಗಳಿಗೆ ಜನರು ರಿಲಯನ್ಸ್ ಸ್ಟಿಕ್ಕರ್ ಅಂಟಿಸುತ್ತಿರುವ ವಿಡೆಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸೌದಿ ಅರೇಬಿಯಾ ಭಾರತಕ್ಕೆ ಕಳಿಸಿದ ಆಕ್ಸಿಜನ್ ಟ್ಯಾಂಕರ್ ಗಳ ಮೇಲೆ ತನ್ನ ಸ್ಟಿಕ್ಕರ್ ಅಂಟಿಸಿ ರಿಲಯನ್ಸ್ ಬಿಟ್ಟಿ ಪ್ರಚಾರ ಪಡೆಯುತ್ತಿದೆ ಎಂದು ಹೇಳಲಾಗಿದೆ. 

ಆದರೆ ಇಲ್ಲಿ ವಾಸ್ತವ ಬೇರೆಯೇ ಇದೆ. ದೇಶದೆಲ್ಲೆಡೆ ವೈದ್ಯಕೀಯ  ಆಕ್ಸಿಜನ್ ಪೂರೈಕೆ ಮಾಡಲು ರಿಲಯನ್ಸ್ ಗ್ರೂಪ್ ಸಹಕರಿಸುತ್ತಿದೆ. ಇದರ ಭಾಗವಾಗಿ ರಿಲಯನ್ಸ್ ತನ್ನ ಘಟಕಗಳಲ್ಲಿ ವೈದ್ಯಕೀಯ ಆಕ್ಸಿಜನ್ ಉತ್ಪಾದನೆ ಹೆಚ್ಚಿಸಿದೆ. ಹಾಗೆಯೇ ದೇಶದಲ್ಲಿ ಆಕ್ಸಿಜನ್ ಸಾಗಾಟಕ್ಕೆ ಬೇಕಾಗುವ 24 iso ಟ್ಯಾಂಕರ್ ಗಳನ್ನು  ಸೌದಿ ಅರೇಬಿಯಾ ಸಹಿತ ವಿವಿಧ ದೇಶಗಳಿಂದ ವಿಮಾನದಲ್ಲಿ ತರಿಸಿದೆ.

ಸೌದಿ ಅರೇಬಿಯಾ ಭಾರತಕ್ಕೆ 80 ಮೆಟ್ರಿಕ್ ಟನ್ ಮೆಡಿಕಲ್  ಆಕ್ಸಿಜನ್ ಪೂರೈಕೆ ಮಾಡಿದ್ದು ಅದಕ್ಕೆ ಬಳಸಿದ ಟ್ಯಾಂಕರ್ ಗಳ ಚಿತ್ರ ಇಲ್ಲಿ ಕೆಳಗೆ ಭಾರತದಲ್ಲಿ ಸೌದಿ ರಾಯಭಾರ ಕಚೇರಿ ಮಾಡಿದ ಟ್ವೀಟ್ ನಲ್ಲಿದೆ. ಈ ಚಿತ್ರಗಳಿಗೂ ಈಗ ಸೌದಿಯದ್ದು ಎಂದು ವೈರಲ್ ಆಗುತ್ತಿರುವ ಟ್ಯಾಂಕರ್ ಗಳ ಚಿತ್ರಕ್ಕೂ ಬಹಳ ವ್ಯತ್ಯಾಸವಿದೆ. 

ಆದರೆ ರಿಲಯನ್ಸ್ ಪತ್ರಿಕಾ ಹೇಳಿಕೆ ಪ್ರಕಾರ ಈಗ ದೇಶದಲ್ಲಿ ರಿಲಯನ್ಸ್ ದೇಶದಲ್ಲೇ ಅತಿದೊಡ್ಡ ವೈದ್ಯಕೀಯ ಆಕ್ಸಿಜನ್ ಉತ್ಪಾದಕ ಸಂಸ್ಥೆಯಾಗಿದೆ. ಎಪ್ರಿಲ್ ತಿಂಗಳಲ್ಲಿ ರಿಲಯನ್ಸ್ 15 ಸಾವಿರ ಮೆಟ್ರಿಕ್ ಟನ್ ವೈದ್ಯಕೀಯ ಆಕ್ಸಿಜನ್ ಅನ್ನು ಉಚಿತವಾಗಿ ಪೂರೈಸಿದ್ದು ಅದರಿಂದ 15 ಲಕ್ಷ ಜನರಿಗೆ ಪ್ರಯೋಜನವಾಗಿದೆ. ಹೀಗೆ ತನ್ನ ಆಕ್ಸಿಜನ್ ಪೂರೈಕೆ ಪ್ರಮಾಣವನ್ನು ಹೆಚ್ಚಿಸಲು ರಿಲಯನ್ಸ್ ಸೌದಿ ಸಹಿತ ವಿವಿಧ ದೇಶಗಳಿಂದ 24 iso ಟ್ಯಾಂಕರ್ ಗಳನ್ನು ತರಿಸಿದೆ. 

ಭಾರತದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆಯಿಲ್ಲ. ಸಮಸ್ಯೆ ಇರುವುದು ಅದನ್ನು ಸಾಗಿಸಲು ಬೇಕಾದ ಸೂಕ್ತ ಕ್ರಯೋಜನಿಕ್ ಟ್ಯಾಂಕರ್ ಗಳ ಕೊರತೆಯದ್ದು ಎಂದು ಈಗಾಗಲೇ ಮಾಧ್ಯಮಗಳು ವರದಿ ಮಾಡಿವೆ. ಭಾರತದ ಪ್ರಮುಖ ಸ್ಟೀಲ್ ಹಾಗು ಪೆಟ್ರೋಲಿಯಂ ಕಂಪೆನಿಗಳು ಈಗಾಗಲೇ ಬೇಕಾದಷ್ಟು ಆಕ್ಸಿಜನ್ ಉತ್ಪಾದನೆಗೆ ಸಹಕರಿಸುತ್ತಿವೆ. ಇವುಗಳಲ್ಲಿ ರಿಲಯನ್ಸ್ ಪ್ರಮುಖವಾದುದು. ಇದೇ ಸಂದರ್ಭದಲ್ಲಿ ಉತ್ಪಾದನೆಯಾದ ವೈದ್ಯಕೀಯ ಆಕ್ಸಿಜನ್ ಅನ್ನು ಸಾಗಾಟ ಮಾಡಲು ಭಾರತೀಯ ವಾಯುಸೇನೆ ವಿದೇಶಗಳಿಂದ್ ಖಾಲಿ ಕ್ರಯೋಜೆನಿಕ್ ಟ್ಯಾಂಕರ್ ಗಳನ್ನು ವಿಮಾನದ ಮೂಲಕ ತರುತ್ತಿದೆ. ಸೌದಿ ಸಹಿತ ಹಲವು ದೇಶಗಳಿಂದ ಹೀಗೆ ಖಾಲಿ ಕ್ರಯೋಜೆನಿಕ್  ಟ್ಯಾಂಕರ್ ಗಳು ಬಂದಿವೆ. 

ಹಾಗಾಗಿ ಸೌದಿ ಕಳಿಸಿದ ಆಕ್ಸಿಜನ್ ಟ್ಯಾಂಕರ್ ಗಳಿಗೆ ರಿಲಯನ್ಸ್ ತನ್ನ ಹೆಸರಿನ ಸ್ಟಿಕ್ಕರ್ ಅಂಟಿಸಿ ಬಿಟ್ಟಿ ಪ್ರಚಾರ ಪಡೆಯುತ್ತಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. 

ಕೃಪೆ :  www.thequint.com, boomlive.in

Full View

Media Release - RIL by Himanshi Dahiya

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News