ಪ್ರತಿಭಟನಾಕಾರ ಫೆಲೆಸ್ತೀನಿಯರ ಮೇಲೆ ಇಸ್ರೇಲಿ ಪೋಲೀಸರಿಂದ ರಬ್ಬರ್ ಬುಲೆಟ್, ಸ್ಟನ್ ಗ್ರೆನೇಡ್ ದಾಳಿ: 205 ಮಂದಿಗೆ ಗಾಯ

Update: 2021-05-08 16:03 GMT
photo: al jazeera

ಸಂಯಮ ವಹಿಸಲು ಅಂತರ್ರಾಷ್ಟ್ರೀಯ ಸಮುದಾಯ ಕರೆ
ಈ ವಿಷಯದಲ್ಲಿ ಸಂಬಂಧಪಟ್ಟಿರುವ ಎಲ್ಲರೂ ಶಾಂತಿ ಕಾಪಾಡಬೇಕು ಮತ್ತು ಸಂಯಮ ವಹಿಸಬೇಕು ಎಂಬುದಾಗಿ ವಿಶ್ವಸಂಸ್ಥೆ ಮತ್ತು ಅಮೆರಿಕ ಕರೆ ನೀಡಿದೆ.
ಅದೇ ವೇಳೆ, ಐರೋಪ್ಯ ಒಕ್ಕೂಟ ಮತ್ತು ಜೋರ್ಡಾನ್ ಸೇರಿದಂತೆ ಹಲವು ದೇಶಗಳು, ಫೆಲೆಸ್ತೀನೀಯರ ಸಂಭಾವ್ಯ ಒಕ್ಕಲೆಬ್ಬಿಸುವಿಕೆಗೆ ಆತಂಕ ವ್ಯಕ್ತಪಡಿಸಿವೆ.

‘ನಾಳೆ ನಮ್ಮ ಮನೆಗೆ ಬರುತ್ತಾರೆ’
‘‘ಒಕ್ಕಲೆಬ್ಬಿಸುವಿಕೆಯ ಅಪಾಯವನ್ನು ಎದುರಿಸುತ್ತಿರುವ ಈ ಜನರ ಪರವಾಗಿ ಇಂದು ನಾವು ನಿಲ್ಲದಿದ್ದರೆ, ನಾಳೆ ಅವರು ನನ್ನನ್ನು, ಅವಳನ್ನು, ಅವನನ್ನು ಹಾಗೂ ಇಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಫೆಲೆಸ್ತೀನೀಯನನ್ನು ಒಕ್ಕಲೆಬ್ಬಿಸಲು ಬರುತ್ತಾರೆ’’ ಎಂದು ಸಮೀಪದ ಇಸಾವಿಯ ಪಟ್ಟಣದಿಂದ ಬಂದ ಪ್ರತಿಭಟನಕಾರರೊಬ್ಬರು ಹೇಳಿದರು.

ಇಸ್ರೇಲ್ ಸುಪ್ರೀಂ ಕೋರ್ಟ್ ವಿಚಾರಣೆ
ಶೇಖ್ ಜರಾ ಪಟ್ಟಣದಿಂದ ಫೆಲೆಸ್ತೀನೀಯರನ್ನು ಒಕ್ಕಲೆಬ್ಬಿಸುವುದಕ್ಕೆ ಸಂಬಂಧಿಸಿ ಇಸ್ರೇಲ್ನ ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

ಸೋಮವಾರವೇ ಇಸ್ರೇಲ್ ಜೆರುಸಲೇಮ್ ದಿನವನ್ನು ಆಚರಿಸುತ್ತಿದೆ. 1967ರ ಮಧ್ಯಪ್ರಾಚ್ಯ ಯುದ್ಧದ ವೇಳೆ, ಈ ದಿನದಂದು ಇಸ್ರೇಲ್ ಪೂರ್ವ ಜೆರುಸಲೇಮನ್ನು ವಶಪಡಿಸಿಕೊಂಡಿತ್ತು. ಅದರ ಸ್ಮರಣಾರ್ಥ ಇಸ್ರೇಲ್ ಜೆರುಸಲೇಮ್ ದಿನವನ್ನು ಆಚರಿಸುತ್ತಿದೆ.

ಶೇಖ್ ಜರಾ ಪಟ್ಟಣದ ನಿವಾಸಿಗಳು ಹೆಚ್ಚಿನವರು ಫೆಲೆಸ್ತೀನೀಯರು. ಆದರೆ, ಪಟ್ಟಣದ ಒಂದು ಭಾಗದಲ್ಲಿ ಧರ್ಮಬೀರು ಯಹೂದಿಗಳು ಆರಾಧಿಸುವ ಪ್ರಾಚೀನ ಸಂತ ಸೈಮನ್ ದ ಜಸ್ಟ್ರ ಗೋರಿಯಿದೆ.

ಅಂತರ್ರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್

ಫೆಲೆಸ್ತೀನೀಯರನ್ನು ಒಕ್ಕಲೆಬ್ಬಿಸುವಂತೆ ಇಸ್ರೇಲ್ ಸುಪ್ರೀಂ ಕೋರ್ಟ್ ತೀರ್ಪು ನೀಡಿದರೆ ಹಾಗೂ ಇಸ್ರೇಲ್ ಸರಕಾರ ಅದನ್ನು ಅನುಷ್ಠಾನಗೊಳಿಸಿದರೆ, ಪೂರ್ವ ಜೆರುಸಲೇಮ್ ಭೂಭಾಗಕ್ಕೆ ಸಂಬಂಧಿಸಿದ ಅಂತರ್ರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ರ ವಕ್ತಾರರು ಹೇಳಿದ್ದಾರೆ.
ಇಸ್ರೇಲ್ 1967ರ ಯುದ್ಧದಲ್ಲಿ ಪೂರ್ವ ಜೆರುಸಲೇಮ್ ಮತ್ತು ಪಶ್ಚಿಮ ದಂಡೆಯನ್ನು ವಶಪಡಿಸಿಕೊಂಡಿತ್ತು.

‘‘ಶೇಖ್ ಜರಾ ಪಟ್ಟಣದಲ್ಲಿನ ಒಕ್ಕಲೆಬ್ಬಿಸುವಿಕೆ ಸೇರಿದಂತೆ ಎಲ್ಲ ಬಲವಂತದ ಒಕ್ಕಲೆಬ್ಬಿಸುವಿಕೆಯನ್ನು ತಕ್ಷಣ ನಿಲ್ಲಿಸುವಂತೆ ನಾವು ಇಸ್ರೇಲ್ಗೆ ಕರೆ ನೀಡುತ್ತೇವೆ ಹಾಗೂ ಪ್ರತಿಕೂಲಾತ್ಮಕ ವಾತಾವರಣವನ್ನು ನಿರ್ಮಿಸಬಲ್ಲ ಎಲ್ಲ ಚಟುವಟಿಕೆಗಳನ್ನು ಕೊನೆಗೊಳಿಸುವಂತೆಯೂ ನಾವು ಕರೆ ನೀಡುತ್ತೇವೆ’’ ಎಂದು ವಕ್ತಾರ ರೂಪರ್ಟ್ ಕಾಲ್ವಿಲ್ ಶುಕ್ರವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News