ಅಸ್ಸಾಂ ಮುಖ್ಯಮಂತ್ರಿಯಾಗಿ ಸೋಮವಾರ ಹಿಮಂತ ಬಿಸ್ವಾ ಶರ್ಮಾ ಪ್ರಮಾಣವಚನ

Update: 2021-05-09 12:22 GMT

ಗುವಾಹಟಿ: ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂನ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ರವಿವಾರ, ಶರ್ಮಾ ಅವರನ್ನು ರಾಜ್ಯದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ.  ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಧಾನಸಭೆಗೆ ಹೊಸದಾಗಿ ಆಯ್ಕೆಯಾದ ಶಾಸಕಾಂಗ ಸದಸ್ಯರು ಶರ್ಮಾ ಅವರನ್ನು ತಮ್ಮ ನಾಯಕ ಎಂದು ಅಂಗೀಕರಿಸಿದ ನಂತರ ಶರ್ಮಾ ಅವರನ್ನು ನಾಯಕರಾಗಿ ಸರ್ವಾನುಮತದಿಂದ  ಆಯ್ಕೆ ಮಾಡಲಾಯಿತು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ನಿರ್ಧಾರವನ್ನು ರವಿವಾರ ಪ್ರಕಟಿಸಿದರು.

ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಮಾತನಾಡಿದ ನಿಯೋಜಿತ ಸಿಎಂ ಶರ್ಮಾ, “ಚಂದ್ರನಿಗೆ ಸಹ ಕಲೆಗಳಿವೆ. ಆದರೆ ಸರ್ಬಾನಂದ ಸೋನೊವಾಲ್ ನೇತೃತ್ವದ ಸರಕಾರವು ಕಳೆದ ಐದು ವರ್ಷಗಳಿಂದ ಯಾವುದೇ ಕಳಂಕವಿಲ್ಲದೆ ಕೆಲಸ ಮಾಡಿದೆ. ಮುಖ್ಯಮಂತ್ರಿಯಾಗಿದ್ದ ಸರ್ಬಾನಂದ ಸೋನೊವಾಲ್ ನಮ್ಮ ನಾಯಕ. ಅವರು ಮುಂಬರುವ ಕಾಲದಲ್ಲಿ ನಮ್ಮನ್ನು ಮುನ್ನಡೆಸುತ್ತಾರೆ ಮತ್ತು ನಮಗೆ ಮಾರ್ಗವನ್ನು ತೋರಿಸುತ್ತಾರೆ ಎಂದರು.

ರವಿವಾರ ಬೆಳಗ್ಗೆ ಸೋನೊವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಜಗದೀಶ್ ಮುಖಿ ಅವರಿಗೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News