ಸ್ಮಶಾನದಿಂದ ಮೃತದೇಹದ ಬಟ್ಟೆಗಳನ್ನು ಕದ್ದುಮಾರುತ್ತಿದ್ದ ಏಳು ಜನರ ಬಂಧನ

Update: 2021-05-09 14:48 GMT

ಬಾಗಪತ್: ಪಶ್ಚಿಮ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಶವಸಂಸ್ಕಾರ ಹಾಗೂ  ಸ್ಮಶಾನ ಸ್ಥಳಗಳಿಂದ ಸತ್ತವರ ಬಟ್ಟೆಗಳನ್ನು ಕದಿಯುತ್ತಿದ್ದ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

"ಏಳು ಜನರನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಬಂಧಿತರು ಸತ್ತವರ ಬೆಡ್‌ಶೀಟ್‌ಗಳು, ಸೀರೆಗಳು, ಬಟ್ಟೆಗಳನ್ನು ಕದಿಯುತ್ತಿದ್ದರು ಎಂದು ತಿಳಿದುಬಂದಿದೆ. 520 ಬೆಡ್‌ಶೀಟ್‌ಗಳು, 127 ಕುರ್ತಾಗಳು, 52 ಬಿಳಿ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ"  ಎಂದು ವೃತ್ತ ಅಧಿಕಾರಿ ಅಲೋಕ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಕದ್ದ ವಸ್ತುಗಳನ್ನು ಚೆನ್ನಾಗಿ ತೊಳೆದು ಇಸ್ತ್ರಿ ಮಾಡಿದ ನಂತರ, ಅದನ್ನು ಗ್ವಾಲಿಯರ್ ಕಂಪನಿಯ ಲೇಬಲ್ ಬಳಸಿ ಮತ್ತೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿ ಹೇಳಿದರು.

ಈ ಪ್ರದೇಶದ ಕೆಲವು ಬಟ್ಟೆ ವ್ಯಾಪಾರಿಗಳು ಇವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಒಂದು ದಿನದ ಕಳ್ಳತನಕ್ಕೆ ರೂ. 300 ಪಾವತಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ ಎಂದು ಅವರು ಹೇಳಿದರು.

"ಬಂಧಿತ ಏಳು ಜನರಲ್ಲಿ ಮೂವರು ಒಂದೇ ಕುಟುಂಬದವರು. ಈ ಜನರು ಕಳೆದ 10 ವರ್ಷಗಳಿಂದ ಕದಿಯುವ ಕೆಲಸ ಮಾಡುತ್ತಿದ್ದಾರೆ. ಇದೀಗ  ಕೊರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬಂಧಿಸಲ್ಪಟ್ಟಿರುವ ಈ 7 ಮಂದಿಯ ವಿರುದ್ಧ ಸಾಂಕ್ರಾಮಿಕ ಕಾಯ್ದೆಯಡಿ ಸಹ ಆರೋಪ ಹೊರಿಸಲಾಗುವುದು" ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News