ಸೆಂಟ್ರಲ್ ವಿಸ್ತಾ ಯೋಜನೆಗೆ ಮಧ್ಯಂತರ ತಡೆ ಕೋರಿ ಸಲ್ಲಿಸಿದ ಮನವಿ ವಿಚಾರಣೆಗೆ ದಿಲ್ಲಿ ಹೈಕೋರ್ಟ್ ಅಸ್ತು

Update: 2021-05-10 15:39 GMT

ಹೊಸದಿಲ್ಲಿ, ಮೇ 10: ಕೊರೋನ ಸಾಂಕ್ರಾಮಿಕ ಅತ್ಯುಚ್ಛ ಮಟ್ಟ ತಲುಪಿರುವ ಸಂದರ್ಭ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಮಧ್ಯಂತರ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆಯನ್ನು ಮಂಗಳವಾರ ನಡೆಸಲು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ಒಪ್ಪಿಕೊಂಡಿದೆ.
 
ಈ ಹಿಂದೆ ನ್ಯಾಯಾಲಯ ಮನವಿಯ ವಿಚಾರಣೆಯನ್ನು ಮೇ 17ರಂದು ನಡೆಸಲು ಪರಿಗಣಿಸಿತ್ತು. ಕಳೆದ ವಾರ ಸುಪ್ರೀಂ ಕೋರ್ಟ್ ಮನವಿಯ ವಿಚಾರಣೆ ಮುಂದೂಡಿದ ಉಚ್ಚ ನ್ಯಾಯಾಲಯದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಲು ನಿರಾಕರಿಸಿತ್ತು. ಅಲ್ಲದೆ, ಮನವಿಯ ತುರ್ತು ವಿಚಾರಣೆ ನಡೆಸಲು ಉಚ್ಚ ನ್ಯಾಯಾಲಯದಲ್ಲಿ ಮನವಿ ಮಾಡುವಂತೆ ದೂರುದಾರರಿಗೆ ತಿಳಿಸಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ 
ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ವಿಭಾಗೀಯ ನ್ಯಾಯಪೀಠ ನೀಡಿದ ಆದೇಶವನ್ನು ಹಿರಿಯ ನ್ಯಾಯವಾದಿ ಸಿದ್ಧಾರ್ಥ ಲುಥ್ರಾ ಇಂದು ಬೆಳಗ್ಗೆ ತಿಳಿಸಿದರು.

ರಾಜ್ಯದ ಭಾಷಾಂತರಕಾರ ಅನ್ಯ ಮಲ್ಹೋತ್ರ, ಇತಿಹಾಸಕಾರ ಹಾಗೂ ಸಾಕ್ಷಚಿತ್ರ ನಿರ್ದೇಶಕ ಸೊಹೈಲ್ ಹಶ್ಮಿ ಈ ಮನವಿ ಸಲ್ಲಿಸಿದ್ದರು. ಯೋಜನೆಯ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಿರುವುದರಿಂದ ಕೊರೋನ ಸೂಪರ್ ಸ್ಪ್ರೆಡ್ಡಿಂಗ್ ಸಾಮರ್ಥ್ಯ ಹಾಗೂ ದಿನಂಪ್ರತಿ ಕೊರೋನ ಸೋಂಕಿಗೆ ಒಡ್ಡಿಕೊಳ್ಳುವ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಮನವಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News