ಗುಜರಾತ್: ಕೋವಿಡ್ ಆರೈಕೆ ಕೇಂದ್ರದಲ್ಲಿ ಅಗ್ನಿ ಆಕಸ್ಮಿಕ

Update: 2021-05-12 06:46 GMT
ಸಾಂದರ್ಭಿಕ ಚಿತ್ರ 

ಅಹಮದಾಬಾದ್: ಗುಜರಾತ್‌ನ ಭಾವನಗರ ಪಟ್ಟಣದಲ್ಲಿ  ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲ್ಪಟ್ಟಿರುವ ಹೊಟೇಲ್ ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ.  ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಸಣ್ಣ ಬೆಂಕಿ ಮತ್ತು ಹೊಗೆ' ಕಾಣಿಸಿಕೊಂಡ ನಂತರ ಒಟ್ಟು 61 ಕೊರೋನವೈರಸ್ ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಉಳಿದ ಏಳು ಮಂದಿಯನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ರಾಜಧಾನಿಯಿಂದ 170 ಕಿ.ಮೀ. ದೂರದಲ್ಲಿರುವ ಈ ಹೋಟೆಲ್ ಅನ್ನು ಖಾಸಗಿ ಆಸ್ಪತ್ರೆಯವರು ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಿದ್ದರು.

ರೋಗಿಗಳನ್ನು ಇರಿಸಲಾಗಿರುವ ಜನರೇಷನ್ ಎಕ್ಸ್ ಹೋಟೆಲ್ನ  ಮೂರನೇ ಮಹಡಿಯಲ್ಲಿ ಹೊಗೆ ಆವರಿಸಿತ್ತು ಎಂದು ಭಾವನಗರ ಅಗ್ನಿಶಾಮಕ ದಳದ ಹಿರಿಯ ಅಗ್ನಿಶಾಮಕ ಅಧಿಕಾರಿ ಭಾರತ್ ಕೆನಡಾ ತಿಳಿಸಿದ್ದಾರೆ.

ಕೇಂದ್ರದಲ್ಲಿದ್ದ ಎಲ್ಲಾ 68 ಕೊರೋನವೈರಸ್ ರೋಗಿಗಳು ಸುರಕ್ಷಿತರಾಗಿದ್ದಾರೆ ಹಾಗೂ ಸಣ್ಣ ಬೆಂಕಿಯನ್ನುತಕ್ಷಣವೇ ನಿಯಂತ್ರಣಕ್ಕೆ ತರಲಾಗಿದೆ ಎಂದು ಭಾವನಗರ ಕಲೆಕ್ಟರ್ ಗೌರಂಗ್ ಮಕ್ವಾನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News