ಕೋವಿಡ್ ರೋಗಿಗಳ ಲಸಿಕೆ, ಔಷಧಿ ಮೇಲಿನ ಜಿಎಸ್ ಟಿ ಮನ್ನಾ ಮಾಡಿ: ಕೇಂದ್ರಕ್ಕೆ ತಮಿಳುನಾಡು ಸಿಎಂ ಒತ್ತಾಯ

Update: 2021-05-13 13:21 GMT

ಚೆನ್ನೈ: ಕೋವಿಡ್ -19 ಲಸಿಕೆಗಳು ಹಾಗೂ  ಇತರ ಔಷಧಿಗಳನ್ನು ರಾಜ್ಯ ಸರ್ಕಾರಗಳೇ ಖರೀದಿಸುತ್ತಿರುವುದರಿಂದ ನಿರ್ದಿಷ್ಟ ಅವಧಿಗೆ ಕೋವಿಡ್ -19 ಲಸಿಕೆಗಳು ಹಾಗೂ  ಔಷಧಿಗಳ ಜಿಎಸ್ ಟಿ  ಮನ್ನಾ ಮಾಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

ಬಾಕಿ ಉಳಿದಿರುವ ಜಿಎಸ್ ಟಿ ಪರಿಹಾರ ಹಾಗೂ  ಅಕ್ಕಿ ಸಬ್ಸಿಡಿಯನ್ನು ತಕ್ಷಣ ವಿತರಿಸುವುದು, ರಾಜ್ಯದ ಸಾಲ ಮಿತಿಯನ್ನು ರಾಜ್ಯ ಜಿಡಿಪಿಯ 3 ಶೇ. ರಿಂದ 4 ಶೇ.ಕ್ಕೆ ಹೆಚ್ಚಿಸುವುದು ಹಾಗೂ  ನಷ್ಟವನ್ನು ಸರಿದೂಗಿಸಲು ತಾತ್ಕಾಲಿಕ ಅನುದಾನ ಸಹಾಯವನ್ನು ಒಳಗೊಂಡಂತೆ ಅವರು ಪ್ರಧಾನಮಂತ್ರಿಗೆ ಕೆಲವು ವಿನಂತಿಗಳನ್ನು ಕೂಡ  ಮಾಡಿದರು.

ಎಲ್ಲಾ ರಾಜ್ಯಗಳು ಕೋವಿಡ್-19 ಲಸಿಕೆಗಳನ್ನು ಹಾಗೂ  ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಔಷಧಿಗಳನ್ನು ಸಂಗ್ರಹಿಸುತ್ತಿವೆ. ಇದನ್ನು ಪರಿಗಣಿಸಿ, ಜಿಎಸ್ ಟಿ  ಕೌನ್ಸಿಲ್ ನೊಂದಿಗೆ  ಸಮಾಲೋಚಿಸಿ, ಕೇಂದ್ರವು ಲಸಿಕೆಗಳು ಹಾಗೂ  ಔ ಷಧಿಗಳಿಗೆ ನಿರ್ದಿಷ್ಟ ಅವಧಿಗೆ ಶೂನ್ಯ ದರವನ್ನು ನಿಗದಿಪಡಿಸಬೇಕು ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News