ಕೊರೋನ ಎರಡನೇ ಅಲೆಗೆ ದೇಶಾದ್ಯಂತ ಈ ತನಕ 270 ವೈದ್ಯರು ಬಲಿ

Update: 2021-05-18 09:24 GMT

ಹೊಸದಿಲ್ಲಿ: ಇದುವರೆಗಿನ ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ದೇಶಾದ್ಯಂತ 270 ವೈದ್ಯರು ಕೊರೋನವೈರಸ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳವಾರ ತಿಳಿಸಿದೆ.

ಮೃತ ವೈದ್ಯರ ಪಟ್ಟಿಯಲ್ಲಿ ಮಾಜಿ ಐಎಂಎ ಅಧ್ಯಕ್ಷ ಡಾ ಕೆ. ಕೆ. ಅಗರ್ವಾಲ್ ಸೇರಿದ್ದಾರೆ, ಅವರು ಸೋಮವಾರ ಮಾರಣಾಂತಿಕ ವೈರಸ್ ಗೆ  ಬಲಿಯಾಗಿದ್ದಾರೆ.

ಬಿಹಾರದಲ್ಲಿ ಗರಿಷ್ಠ 78 ವೈದ್ಯರು ಸಾವನ್ನಪ್ಪಿದ್ದಾರೆ. ಆ ಬಳಿಕ  ಉತ್ತರ ಪ್ರದೇಶ (37), ದಿಲ್ಲಿ (29) ಹಾಗೂ  ಆಂಧ್ರಪ್ರದೇಶದಲ್ಲಿ (22) ಹೆಚ್ಚು ವೈದ್ಯರು ಸಾವನ್ನಪ್ಪಿದ್ದಾರೆ.

ಐಎಂಎ ಕೋವಿಡ್ -19 ನೋಂದಾವಣೆಯ ಪ್ರಕಾರ, ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ 748 ವೈದ್ಯರು ಕೊರೋನ ಸೋಂಕಿಗೆ  ಬಲಿಯಾಗಿದ್ದಾರೆ.

"ಕಳೆದ ವರ್ಷ, ಭಾರತದಾದ್ಯಂತ 748 ವೈದ್ಯರು ಕೋವಿಡ್-19 ಗೆ ಬಲಿಯಾದರು, ಆದರೆ ಪ್ರಸ್ತುತ ಕೊರೋನ  ಅಲೆಗೆ ಅಲ್ಪಾವಧಿಯಲ್ಲಿ, ನಾವು 270 ವೈದ್ಯರನ್ನು ಕಳೆದುಕೊಂಡಿದ್ದೇವೆ.  ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಅತ್ಯಂತ ಮಾರಕವಾಗಿದೆ" ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News