ಸಿಬಿಎಸ್ಇ 10 ನೇ ತರಗತಿ ಫಲಿತಾಂಶ ಮುಂದೂಡಿಕೆ

Update: 2021-05-18 10:28 GMT

ಹೊಸದಿಲ್ಲಿ: ಆಂತರಿಕ ಮೌಲ್ಯಮಾಪನಗಳ ಮೂಲಕ ನೀಡಲಾಗಿರುವ ಆಂತರಿಕ ಅಂಕಗಳನ್ನು ಶಾಲೆಗಳು ಸಲ್ಲಿಸುವ ಗಡುವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿಸ್ತರಿಸಿದೆ. ಈಗ, ಶಾಲೆಗಳು ಜೂನ್ 30 ರೊಳಗೆ ಈ ಅಂಕಗಳನ್ನು ಸಲ್ಲಿಸಬಹುದು. ಆ ನಂತರ ಜೂನ್ ಮೂರನೇ ವಾರದಲ್ಲಿ ಬಿಡುಗಡೆಯಾಗಬೇಕಿದ್ದ 10 ನೇ ತರಗತಿ ಫಲಿತಾಂಶವನ್ನು ಮುಂದೂಡಲಾಗಿದೆ. ಈಗ ಫಲಿತಾಂಶವನ್ನು ಜುಲೈ ಮೊದಲ ವಾರದೊಳಗೆ ಘೋಷಿಸುವ ನಿರೀಕ್ಷೆಯಿದೆ, ಆದಾಗ್ಯೂ, ಮಂಡಳಿಯು ನವೀಕರಿಸಿದ ಫಲಿತಾಂಶ ದಿನಾಂಕವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ದೇಶಾದ್ಯಂತ ಹದಗೆಟ್ಟಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

" ಶಿಕ್ಷಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಸಿಬಿಎಸ್ಇ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ" ಎಂದು ಮಂಡಳಿಯು ಅಧಿಕೃತ ಹೇಳಿಕಯೊಂದರಲ್ಲಿ ತಿಳಿಸಿದೆ.

"ಸಾಂಕ್ರಾಮಿಕ, ರಾಜ್ಯಗಳಲ್ಲಿನ ಲಾಕ್ ಡೌನ್  ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು  ಶಾಲೆಗಳಿಗೆ ಜೂನ್ 30ರ ವರೆಗೆ ತಮ್ಮ ಅಂಕಗಳ ಸಲ್ಲಿಕೆ ಗಡುವನ್ನು ವಿಸ್ತರಿಸಲಾಗಿದೆ. ಆದಾಗ್ಯೂ, ಫಲಿತಾಂಶ ಸಮಿತಿಯು ಸಿಬಿಎಸ್ಇ ಒದಗಿಸಿದ ಯೋಜನೆಯ ಆಧಾರದ ಮೇಲೆ ತನ್ನದೇ ಆದ ವೇಳಾಪಟ್ಟಿಯನ್ನು ಮಾಡಬಹುದು. ಆದಾಗ್ಯೂ, ಜೂನ್ 30 ಗಡುವು ಆಗಿರುತ್ತದೆ.

ಈ ವರ್ಷ, 10 ನೇ ತರಗತಿ ವಿದ್ಯಾರ್ಥಿಗಳಿಗೆ, ಸಿಬಿಎಸ್‌ಇ ಯಾವುದೇ ಪರೀಕ್ಷೆಗಳನ್ನು ನಡೆಸುವುದಿಲ್ಲ. ವಿಶೇಷ ಮಾನದಂಡದ ಆಧಾರದ ಮೇಲೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರತಿ ವಿಷಯಕ್ಕೆ, ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ 20 ಅಂಕಗಳನ್ನು ನೀಡಲಾಗುವುದು ಹಾಗೂ ಮಂಡಳಿಯು ನೀಡುವ ಹೊಸ ಸೂತ್ರಗಳನ್ನು ಆಧರಿಸಿ 80 ಅಂಕಗಳನ್ನು ನೀಡಲಾಗುತ್ತದೆ. ಶಾಲೆಗಳು ನಿಗದಿತ ಸಮಯದೊಳಗೆ ಈ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗಿತ್ತು. ಆದಾಗ್ಯೂ, ದಿಲ್ಲಿ ಸರಕಾರ ಸಿಬಿಎಸ್‌ಇಗೆ ಟೈಮ್‌ಲೈನ್‌ನಲ್ಲಿ  ವಿರಾಮ ನೀಡುವಂತೆ ಪತ್ರ ಬರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News