×
Ad

ಪಶ್ಚಿಮಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯರಿಗೆ ಕೊರೋನ ಪಾಸಿಟಿವ್

Update: 2021-05-19 13:08 IST

ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ ಹಾಗೂ  ವೈದ್ಯರು ಅವರನ್ನು ಮನೆಯಲ್ಲಿ ಪ್ರತ್ಯೇಕವಾಗಿರಲು ಸಲಹೆ ನೀಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.

77 ವರ್ಷದ ಭಟ್ಟಾಚಾರ್ಯ ಅವರ ಪತ್ನಿ ಮೀರಾ ಭಟ್ಟಾಚಾರ್ಯರಿಗೆ ಕೂಡ ಕೊರೋನ ಸೋಂಕು ಇರುವುದು  ಕೊರೋನ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಂತರ ಮೀರಾ ಅವರನ್ನು ಮಂಗಳವಾರ ಸಂಜೆ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

"ಬುದ್ಧದೇಬ್ ಭಟ್ಟಾಚಾರ್ಯ, ಅವರ ಪತ್ನಿ ಹಾಗೂ  ಅವರ ಪರಿಚಾರಕರ ಗಂಟಲುದ್ರವ ಮಾದರಿಗಳನ್ನು ಇಂದು ಬೆಳಿಗ್ಗೆ ಸಂಗ್ರಹಿಸಲಾಗಿದೆ ಅವರಿಗೆ ಕೊರೋನ ಪಾಸಿಟಿವ್ ಆಗಿದೆ ಎಂದು ಮೂಲವೊಂದು ಮಂಗಳವಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News