ಮೇ 26ರಂದು ಮತ್ತೊಂದು ಚಂಡಮಾರುತ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Update: 2021-05-19 18:05 GMT

ಹೊಸದಿಲ್ಲಿ, ಮೇ 19:  ತೌಕ್ತೆ ಚಂಡಮಾರುತದ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 26ರ ವೇಳೆಗೆ ಈ ಚಂಡಮಾರುತ ಬಂಗಾಳ, ಒಡಿಶಾ ತೀರಕ್ಕೆ ಅಪ್ಪಳಿಸಲಿದೆ. ಮೇ 25ರ ಸಂಜೆಯ ಬಳಿಕ ಈ ಎರಡೂ ರಾಜ್ಯಗಳ ಕಡಲ ತೀರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಮೇ 22ರಂದು ಅಂಡಮಾನ್ ನ ಬಳಿ ಬಂಗಾಳ ಕೊಲ್ಲಿಯಲ್ಲಿ ಮೂಡುವ ಚಂಡಮಾರುತ  23ರಂದು ಉತ್ತರ ಮತ್ತು ವಾಯವ್ಯದತ್ತ ಮುಂದುವರಿಯಲಿದೆ. ಮೇ 22ರ ಬಳಿಕ ಮೀನುಗಾರರು ಹಾಗೂ ದೋಣಿಗಳು ಕಡಲಿಗೆ ಇಳಿಯದಂತೆ ಎಚ್ಚರಿಸಲಾಗಿದೆ ಎಂದು ಇಲಾಖೆ ಹೇಳಿದೆ.

ಸಾಮಾನ್ಯವಾಗಿ ಮುಂಗಾರು ಪೂರ್ವದ ಎಪ್ರಿಲ್-ಮೇ ತಿಂಗಳಿನಲ್ಲಿ ಪೂರ್ವ ಮತ್ತು ಪಶ್ಚಿಮ ತೀರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಉಂಟಾಗುತ್ತದೆ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News