ಇಸ್ರೇಲ್-ಫೆಲೆಸ್ತೀನ್ ಯುದ್ಧವಿರಾಮದ ಬಳಿಕ ಗಾಝಾ ಪ್ರವೇಶಿಸಿದ ಪರಿಹಾರ ಟ್ರಕ್ ಗಳು: ಜನಜೀವನ ಸಹಜಸ್ಥಿತಿಗೆ
ಗಾಝಾ ನಗರ (ಫೆಲೆಸ್ತೀನ್), ಮೇ 22: ಇಸ್ರೇಲ್-ಫೆಲೆಸ್ತೀನ್ ಯುದ್ಧವಿರಾಮ ಜಾರಿಗೆ ಬಂದ ಬಳಿಕ, ಶುಕ್ರವಾರ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಅವುಗಳ ಭಾಗೀದಾರರಿಗಾಗಿ 13 ಟ್ರಕ್ ಸರಕು ಗಾಝಾವನ್ನು ಪ್ರವೇಶಿಸಿದೆ ಹಾಗೂ 18 ಮಿಲಿಯ ಡಾಲರ್ (ಸುಮಾರು 131 ಕೋಟಿ ರೂಪಾಯಿ) ನೆರವನ್ನು ಒದಗಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಸಾಮಗ್ರಿಗಳು, ಕೋವಿಡ್-19 ಲಸಿಕೆಗಳು, ವೈದ್ಯಕೀಯ ಸಲಕರಣೆಗಳು ಮತ್ತು ಔಷಧವನ್ನು ಹೊತ್ತ ವಾಹನಗಳು ಕೆರೆಮ್ ಶಾಲಮ್ ಗಡಿದಾಟು ಮೂಲಕ ಗಾಝಾ ಪ್ರವೇಶಿಸಿದವು ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಬಾಂಬ್ ದಾಳಿಗಳ ಅವಧಿಯಲ್ಲಿ ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಘಟಕ (ಯುಎನ್ಆರ್ಡಬ್ಲ್ಯುಎ) ನಡೆಸುತ್ತಿರುವ ಶಾಲೆಗಳಲ್ಲಿ 66,000ಕ್ಕೂ ಅಧಿಕ ಮಂದಿ ನಿರ್ವಸಿತರು ಆಶ್ರಯ ಪಡೆಯುತ್ತಿದ್ದರು. ಅದೀಗ 1,000ಕ್ಕಿಂತಲೂ ಕಡಿಮೆ ಸಂಖ್ಯೆಗೆ ಕುಸಿದಿದೆ ಎಂದು ಯುಎನ್ಆರ್ಡಬ್ಲ್ಯುಎ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯು ನಿರ್ವಸಿತರಿಗೆ ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯುವುದಕ್ಕಾಗಿ ಮುಖಗವಸುಗಳು ಮತ್ತು ಇತರ ಸಲಕರಣೆಗಳು, ನೀರು ಹಾಗೂ ಶೌಚಾಲಯ ಸೌಕರ್ಯಗಳನ್ನು ಒದಗಿಸಿದೆ.
ಗಾಝಾದಲ್ಲಿ ಮಾನವೀಯ ಅಗತ್ಯಗಳನ್ನು ಪೂರೈಸುವುದಕ್ಕಾಗಿ ವಿಶ್ವಸಂಸ್ಥೆಯ ತುರ್ತು ಪರಿಹಾರದ ಸಮನ್ವಯಕಾರ ಹಾಗೂ ಅಧೀನ ಮಹಾಕಾರ್ಯದರ್ಶಿ ಮಾರ್ಕ್ ಲೋಕಾಕ್ 18.6 ಮಿಲಿಯ ಡಾಲರ್ ಒದಗಿಸಿದ್ದಾರೆ.
ಸಾಮಾನ್ಯ ಜೀವನಕ್ಕೆ ಮರಳುತ್ತಿರುವ ಫೆಲೆಸ್ತೀನೀಯರು: ತೆರೆದ ಹೊಟೇಲ್, ಅಂಗಡಿಗಳು; ಮೀನುಗಾರಿಕೆಗೆ ತೆರಳಿದ ಮೀನುಗಾರರು
ಹಮಾಸ್ ಮತ್ತು ಇಸ್ರೇಲ್ ನಡುವಿನ ಭೀಕರ 11 ದಿನಗಳ ಯುದ್ಧ ಶುಕ್ರವಾರ ಯುದ್ಧವಿರಾಮದೊಂದಿಗೆ ಕೊನೆಗೊಂಡ ಬಳಿಕ, ಶನಿವಾರ ಫೆಲೆಸ್ತೀನೀಯರ ದೈನಂದಿನ ಜೀವನ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳಿದೆ.
ಅಂಗಡಿಗಳು, ಹೊಟೇಲ್ಗಳು ತೆರೆದವು ಹಾಗೂ ಮೀನುಗಾರರು ಸಮುದ್ರಕ್ಕೆ ತೆರಳಿದ್ದಾರೆ. ಗಾಝಾ ಪಟ್ಟಿಗೆ ನೆರವು ನಿಧಾನವಾಗಿ ಹರಿದುಬರುತ್ತಿದ್ದು, ಧ್ವಂಸಗೊಂಡ ನಗರದ ಮರುನಿರ್ಮಾಣದತ್ತ ಎಲ್ಲರ ಗಮನ ಹರಿದಿದೆ.
ರಕ್ಷಣಾ ಸಿಬ್ಬಂದಿ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿರಬಹುದಾದ ಮೃತದೇಹಗಳು ಅಥವಾ ಬದುಕುಳಿದವರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಮೇ 10ರಿಂದ ನಡೆದ 11 ದಿನಗಳ ಬಾಂಬ್ ದಾಳಿಯಲ್ಲಿ ಗಾಝಾ ಪಟ್ಟಿಯಲ್ಲಿ 66 ಮಕ್ಕಳು ಸೇರಿದಂತೆ 248 ಮಂದಿ ಮೃತಪಟ್ಟಿದ್ದಾರೆ ಹಾಗೂ 1,900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಸರಕಾರದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲಿ ವಾಯುದಾಳಿಯಲ್ಲಿ ಮೃತಪಟ್ಟವರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ನಾಗರಿಕರು ಎಂದು ವಿಶ್ವಸಂಸ್ಥೆ ತಿಳಿಸಿದೆ.
25 ಕಮಾಂಡರ್ಗಳು ಸೇರಿದಂತೆ ‘’200ಕ್ಕೂ ಅಧಿಕ ಭಯೋತ್ಪಾದಕರನ್ನು’’ ತಾನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ.
ಇದೇ ಅವಧಿಯಲ್ಲಿ ಹಮಾಸ್ ಇಸ್ರೇಲ್ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ ಒಂದು ಮಗು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. ಸುಮಾರು 357 ಮಂದಿ ಗಾಯಗೊಂಡಿದ್ದಾರೆ.

ಅವಳಿ-ದೇಶ’ ಏಕೈಕ ಪರಿಹಾರ: ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಬಗ್ಗೆ ಜೋ ಬೈಡನ್
ಇತ್ತೀಚಿನ ದಿನಗಳಲ್ಲಿ ಇಸ್ರೇಲ್ನ ವಾಯು ದಾಳಿಗಳಿಂದ ಜರ್ಝರಿತಗೊಂಡಿರುವ ಗಾಝಾ ನಗರವನ್ನು ಪುನರ್ನಿರ್ಮಿಸುವ ನಿಟ್ಟಿನಲ್ಲಿ ಮಾಡಲಾಗುವ ಪ್ರಯತ್ನಗಳನ್ನು ಸಂಘಟಿಸಲು ನೆರವು ನೀಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಭರವಸೆ ನೀಡಿದ್ದಾರೆ. ಅದೇ ವೇಳೆ, ಇಸ್ರೇಲ್ನ ಪಕ್ಕದಲ್ಲೇ ಫೆಲೆಸ್ತೀನ್ ದೇಶವೊಂದನ್ನು ರಚಿಸುವುದು ಈ ಸಂಘರ್ಷಕ್ಕಿರುವ ಏಕೈಕ ಪರಿಹಾರವಾಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.
ಸಂಘರ್ಷಪೀಡಿತ ನಗರ ಜೆರುಸಲೇಮ್ನಲ್ಲಿ ‘‘ಸಮುದಾಯಗಳ ನಡುವಿನ ಜಗಳ’’ವನ್ನು ನಿಲ್ಲಿಸುವಂತೆ ಇಸ್ರೇಲ್ಗೆ ತಿಳಿಸಿದ್ದೇನೆ ಎಂಬುದಾಗಿಯೂ ಬೈಡನ್ ಹೇಳಿದರು.
ಆದರೆ, ಇಸ್ರೇಲ್ನ ಭದ್ರತೆಗೆ ಸಂಬಂಧಿಸಿದ ನನ್ನ ಬದ್ಧತೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದರು. ಇಸ್ರೇಲ್ನ ಅಸ್ತಿತ್ವವನ್ನು ಈ ವಲಯ ಸ್ಪಷ್ಟವಾಗಿ ಒಪ್ಪಿಕೊಳ್ಳುವವರೆಗೆ ವಲದಯಲ್ಲಿ ಶಾಂತಿ ಇರುವುದಿಲ್ಲ ಎಂದರು.
ಇಸ್ರೇಲ್ನ ಜೊತೆ-ಜೊತೆಗೇ ಸಾರ್ವಭೌಮ ಫೆಲೆಸ್ತೀನ್ ದೇಶದ ಸ್ಥಾಪನೆ ಹಾಗೂ ಎರಡೂ ದೇಶಗಳಿಗೆ ಜೆರುಸಲೇಮನ್ನು ರಾಜಧಾನಿಯನ್ನಾಗಿಸುವ ಕಲ್ಪನೆಯು ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ನಿವಾರಿಸುವ ನಿಟ್ಟಿನಲ್ಲಿ ದಶಕಗಳಿಂದ ನಡೆಯುತ್ತಿರುವ ಅಂತರ್ರಾಷ್ಟ್ರೀಯ ಸಂಧಾನದ ಪ್ರಧಾನ ಫಲಶ್ರುತಿಯಾಗಿದೆ.
ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರವು ಇಸ್ರೇಲ್-ಫೆಲೆಸ್ತೀನ್ ಸಂಘರ್ಷಕ್ಕೆ ಅವಳಿ-ದೇಶದ ಪರಿಹಾರವನ್ನು ರೂಪಿಸಿತ್ತಾದರೂ, ಅದು ರೂಪಿಸಿದ ನೀಲನಕಾಶೆಯಲ್ಲಿ ಫೆಲೆಸ್ತೀನ್ಗೆ ಸಂಪೂರ್ಣ ಸಾರ್ವಭೌಮತ್ವವಿರಲಿಲ್ಲ. ಫೆಲೆಸ್ತೀನ್ನ ಭದ್ರತಾ ಉಸ್ತುವಾರಿಯನ್ನು ಇಸ್ರೇಲ್ಗೆ ಕೊಡಲಾಗಿತ್ತು.
ಬೈಡನ್ ಶುಕ್ರವಾರ ಪೂರ್ಣ ಪ್ರಮಾಣದ ಅವಳಿ-ದೇಶ ಪರಿಹಾರಕ್ಕೆ ಒತ್ತು ನೀಡಿದರು.
‘‘ಇಸ್ರೇಲ್ನ ಭದ್ರತೆಗೆ ಸಂಬಂಧಿಸಿದ ನನ್ನ ಬದ್ಧತೆಯಲ್ಲಿ ಯಾವುದೇ ಬದಲಾವಣೆಯಿಲ್ಲ’’ ಎಂದು ಬೈಡನ್ ಹೇಳಿದರು.
‘‘ಆದರೆ, ಯಾವುದರಲ್ಲಿ ಬದಲಾವಣೆಯಿದೆ ಎಂದು ನಾನು ಹೇಳುತ್ತೇನೆ. ಅವಳಿ-ದೇಶ ಪರಿಹಾರವನ್ನು ನಾವು ಈಗಲೂ ಬಯಸುತ್ತೇವೆ. ಈ ಬಿಕ್ಕಟ್ಟಿಗೆ ಇದು ಏಕೈಕ ಪರಿಹಾರವಾಗಿದೆ’’ ಎಂದರು.