ಶೇ. 30ಕ್ಕೂ ಅಧಿಕ ಸಾವಿನೊಂದಿಗೆ ಕೊರೋನ ಮಾರಕ ತಿಂಗಳಾಗಿ ಪರಿವರ್ತಿತವಾದ 'ಮೇ'

Update: 2021-05-24 17:57 GMT

ಹೊಸದಿಲ್ಲಿ, ಮೇ. 24: ಭಾರತದಲ್ಲಿ ಮೇ 1ರಿಂದ ಕೊರೋನ ಸೋಂಕಿಗೆ ಸಂಬಂಧಿಸಿ 95,390 ಸಾವು ಸಂಭವಿಸಿರುವುದು ವರದಿಯಾಗಿದ್ದು, ಇದು ಒಟ್ಟು ಸಾವಿನ ಶೇ. 31.41. ಇದರೊಂದಿಗೆ ಕೊರೋನ ಸೋಂಕು ಹರಡಲು ಆರಂಭಿಸಿದ ಬಳಿಕ ಮೇ ಮಾರಣಾಂತಿಕ ತಿಂಗಳಾಗಿ ಪರಿವರ್ತಿತವಾಗಿದೆ.

ದೇಶದಲ್ಲಿ ಇಂದಿನ ವರೆಗೆ ಒಟ್ಟು 2.67 ಕೋಟಿ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1.45 ಕೋಟಿ ಪ್ರಕರಣಗಳು ಎಪ್ರಿಲ್ 1ರಿಂದ ವರದಿಯಾಗಿದೆ. ಇದು ಒಟ್ಟು ಪ್ರಕರಣಗಳ ಶೇ. 54.32 ಎಂದು ಕೇಂದ್ರ ಆರೋಗ್ಯ ಸಚಿವಾಲಯ ದತ್ತಾಂಶ ಹೇಳಿದೆ.

ಮೇ ತಿಂಗಳೊಂದರಲ್ಲೇ 79.89 ಲಕ್ಷ ಪ್ರಕರಣಗಳು ವರದಿಯಾಗಿದೆ. ಇದು ಒಟ್ಟು ಸೋಂಕು ಪ್ರಕರಣಗಳ ಶೇ. 30. ದೇಶದಲ್ಲಿ ಕೊರೋನ ಸೋಂಕಿನಿಂದ ಸಾವಿನ ಸಂಖ್ಯೆ ಸೋಮವಾರ ಬೆಳಗ್ಗೆ 3,03,720ಕ್ಕೆ ಏರಿಕೆಯಾಗಿದೆ ಎಂದು ದತ್ತಾಂಶ ತಿಳಿಸಿದೆ.

ಕೊರೋನ ಸಾಂಕ್ರಾಮಿಕ ರೋಗ ಹರಡಲು ಆರಂಭಿಸಿದ ಬಳಿಕ 3 ಲಕ್ಷ ಸಾವು ಸಂಭವಿಸುವುದರೊಂದಿಗೆ ಅತ್ಯಧಿಕ ಸಾವು ಸಂಭವಿಸಿದ ರಾಷ್ಟ್ರಗಳಲ್ಲಿ ಬ್ರೆಝಿಲ್ ಹಾಗೂ ಅಮೆರಿಕದ ನಂತರದ 3ನೇ ಸ್ಥಾನವನ್ನು ಭಾರತ ಪಡೆದುಕೊಂಡಿದೆ.

ಕೊರೋನ ಸೋಂಕಿನ ಎರಡನೇ ಅಲೆ ತೀವ್ರ ಅಪಾಯಕಾರಿ. ಒಟ್ಟು ಸಾವಿನ ಶೇ. 46 ಎಪ್ರಿಲ್-ಮೇ ಎರಡೇ ತಿಂಗಳಲ್ಲಿ ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ.

ಭಾರತದಲ್ಲಿ ಎಪ್ರಿಲ್ 1ರಿಂದ 1.40 ಲಕ್ಷ ಸಾವು ವರದಿಯಾಗಿದೆ. ಮೇಯಲ್ಲಿ 95,390 ಸಾವುಗಳು ದಾಖಲಾಗಿವೆ. ಇದು ಒಟ್ಟು ಸಾವಿನ ಶೇ. 31.41. ಅಲ್ಲದೆ, ಎಪ್ರಿಲ್ನಲ್ಲಿ ಸಂಭವಿಸಿದ ಸಾವಿಗಿಂತ ದ್ವಿಗುಣ ಸಂಖ್ಯೆಯ ಸಾವು ಮೇಯಲ್ಲಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News