ಸೆಪ್ಟೆಂಬರ್ 19 ರಂದು ಐಪಿಎಲ್ -2021 ಯುಎಇಯಲ್ಲಿ ಪುನರಾರಂಭ ಸಾಧ್ಯತೆ

Update: 2021-05-25 13:55 GMT

ಹೊಸದಿಲ್ಲಿ:  ಭಾರತದಲ್ಲಿನ ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಮೇ 4ರಂದು ಮೊಟಕುಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2021 ಅನ್ನು ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪುನರಾರಂಭಿಸುವ ಸಾಧ್ಯತೆಯಿದೆ ಹಾಗೂ  ಫೈನಲ್ ಪಂದ್ಯವನ್ನು ಅಕ್ಟೋಬರ್‌ನಲ್ಲಿ ಆಡಲಾಗುವುದು ಎಂದು ವರದಿಯಾಗಿದೆ.

ಐಪಿಎಲ್-2021 ಸೆಪ್ಟೆಂಬರ್ 19 ಅಥವಾ 20 ರಂದು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ ಹಾಗೂ  ಫೈನಲ್  ಪಂದ್ಯ ಅಕ್ಟೋಬರ್ 10 ರಂದು ಆಡಲಿದೆ ಎಂದು India Today ವರದಿ ಮಾಡಿದೆ.

ಸೆಪ್ಟೆಂಬರ್ 14 ರಂದು ತಮ್ಮ ಟೆಸ್ಟ್ ಸರಣಿಯನ್ನು ಮುಗಿಸಲಿರುವ ಭಾರತ ಹಾಗೂ  ಇಂಗ್ಲೆಂಡ್‌ನ ಆಟಗಾರರು ಸೆಪ್ಟೆಂಬರ್ 15 ರಂದು ದುಬೈಗೆ ಪ್ರಯಾಣ ಬೆಳೆಸಲಿದ್ದು, ಪಂದ್ಯಾವಳಿ  ಮತ್ತೆ ಆರಂಭವಾಗುವ ಮುನ್ನ 3 ದಿನಗಳವರೆಗೆ ಕ್ವಾರಂಟೈನ್ ನಲ್ಲಿ  ಉಳಿದುಕೊಳ್ಳುವ ನಿರೀಕ್ಷೆಯಿದೆ.

ಲಾಜಿಸ್ಟಿಕ್ಸ್ ಸಹಿತ ಇತರ ವಿಷಯಗಳ ಕುರಿತಾಗಿ ಭಾರತ ಹಾಗೂ  ಇಂಗ್ಲೆಂಡ್‌ನ ಕ್ರಿಕೆಟ್ ಮಂಡಳಿಗಳ ನಡುವೆ ಇನ್ನೂ ಮಾತುಕತೆ ನಡೆಯುತ್ತಿದೆ. ಆದರೆ ಆಗಸ್ಟ್‌ನಲ್ಲಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್‌ ವೇಳಾಪಟ್ಟಿಯನ್ನು  ಬದಲಾಯಿಸಲು ಬಿಸಿಸಿಐನಿಂದ ಇಸಿಬಿಗೆ ಯಾವುದೇ ಅಧಿಕೃತ ವಿನಂತಿ ಅಥವಾ ಪತ್ರ ಕಳುಹಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News