ಎಪ್ರಿಲ್ 1 ರಿಂದ ಕೋವಿಡ್‌ನಿಂದಾಗಿ 577 ಮಕ್ಕಳು ಅನಾಥರಾಗಿದ್ದಾರೆ: ಸ್ಮೃತಿ ಇರಾನಿ

Update: 2021-05-26 07:24 GMT

ಹೊಸದಿಲ್ಲಿ:  ಕೋವಿಡ್-19 ಗೆ ಪೋಷಕರು ಸಾವನ್ನಪ್ಪಿದ ನಂತರ ದೇಶಾದ್ಯಂತ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಎಪ್ರಿಲ್ 1 ರಿಂದ ಮಂಗಳವಾರದವರೆಗೆ ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಮಹಿಳಾ ಹಾಗೂ  ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. 

ಕೋವಿಡ್ ನಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಎಲ್ಲ  ದುರ್ಬಲ ಮಗುವನ್ನು ಬೆಂಬಲಿಸಲು ಹಾಗೂ  ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

"ಕೋವಿಡ್ -19 ಗೆ ಹೆತ್ತವರನ್ನು ಕಳೆದುಕೊಂಡ ಪ್ರತಿ ದುರ್ಬಲ ಮಗುವನ್ನು ಬೆಂಬಲಿಸಲು ಹಾಗೂ  ರಕ್ಷಿಸಲು ಭಾರತ ಸರಕಾರ ಬದ್ಧವಾಗಿದೆ. 2021 ಎಪ್ರಿಲ್ 1 ರಿಂದ ಮಂಗಳವಾರ ಮಧ್ಯಾಹ್ನ 2:00 ರವರೆಗೆ, ದೇಶಾದ್ಯಂತ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 577 ಮಕ್ಕಳ ಹೆತ್ತವರು ಕೋವಿಡ್-19ಕ್ಕೆ ಬಲಿಯಾಗಿದ್ದಾರೆ ಎಂದು ವರದಿ ಮಾಡಿವೆ "ಎಂದು ಇರಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ಮಕ್ಕಳನ್ನು ಅನಾಥರನ್ನಾಗಿ ಮಾಡಲಾಗುವುದಿಲ್ಲ. ಮಕ್ಕಳು ಜಿಲ್ಲಾ ಅಧಿಕಾರಿಗಳ ಕಾವಲು ಹಾಗೂ ರಕ್ಷಣೆಯಲ್ಲಿರುತ್ತಾರೆ ಎಂದು ಪ್ರತಿಪಾದಿಸಿದ ಮೂಲಗಳು, ಅಂತಹ ಮಕ್ಕಳಿಗೆ ಕೌನ್ಸೆಲಿಂಗ್ ಅಗತ್ಯವಿದ್ದರೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ತಂಡ ಸಿದ್ಧವಾಗಿದೆ ಎಂದು ಹೇಳಿವೆ.

ಈ ಮಕ್ಕಳ ಕಲ್ಯಾಣವನ್ನು ಖಾತ್ರಿಪಡಿಸಿಕೊಳ್ಳಲು ಹಣದ ಕೊರತೆಯಿಲ್ಲ ಎಂದು ಸ್ಮೃತಿ ಇರಾನಿ  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News