ಫೆಲೆಸ್ತೀನ್ ಪರ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

Update: 2021-05-27 11:09 GMT
Photo: thewire.in

ಲಕ್ನೋ: ಫೆಲೆಸ್ತೀನ್ ಪರ ಚಿತ್ರವೊಂದನ್ನು ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಮೇ 19ರಂದು ಪೋಸ್ಟ್ ಮಾಡಿದ್ದ  ಉತ್ತರ ಪ್ರದೇಶದ ಆಝಂಘರ್ ಜಿಲ್ಲೆಯ ಸರೈಮಿರ್ ಪಟ್ಟಣದ 32 ವರ್ಷದ ನಾಗರಿಕ ಪತ್ರಕರ್ತ ಯಾಸಿರ್ ಅರಾಫಾತ್‍ ವಿರುದ್ಧ ಇಸ್ರೇಲ್ ದೇಶವನ್ನು ಬೆಂಬಲಿಸುವ ಬಲಪಂಥೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ  ಮೇ 20ರಂದು ಆಝಂಘರ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಮರುದಿನವೇ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ದೊರಕಿದ್ದರೂ ಲಾಕಪ್‍ನಲ್ಲಿದ್ದ ಅನುಭವದಿಂದ ಆಗಿರುವ ಆಘಾತದಿಂದ ಅವರು ಇನ್ನೂ ಹೊರಬಂದಿಲ್ಲ.

ತಮ್ಮ ಫೇಸ್ ಬುಕ್ ಪುಟವನ್ನು  ಆಝಂಘರ್ ಎಕ್ಸ್‍ಪ್ರೆಸ್ ಎಂದು ಅವರು  ಹೆಸರಿಸಿದ್ದು ಅದಕ್ಕೆ 17 ಲಕ್ಷ ಫಾಲೋವರ್ಸ್ ಇದ್ದಾರೆ.  ಆಝಂಘರ್‍ನ ಪ್ರತಿಯೊಬ್ಬ ಮುಸ್ಲಿಂ ಇಸ್ರೇಲ್‌ ನ ಹಿಂಸೆಯನ್ನು ಖಂಡಿಸುವ ಸಲುವಾಗಿ ತಮ್ಮ ಮನೆಯಲ್ಲಿ ಹಾಗೂ ವಾಹನದಲ್ಲಿ ಫೆಲೆಸ್ತೀನಿ ಧ್ವಜವನ್ನು ಮುಂದಿನ ಶುಕ್ರವಾರ ಹಾರಿಸಬೇಕು ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News