ಭಾರತದಲ್ಲಿ ಕೋವಿಡ್ -19 ಎರಡನೇ ಅಲೆ ಇಳಿಮುಖವಾಗುತ್ತಿದೆ: ಕೇಂದ್ರ ಸರಕಾರ

Update: 2021-05-27 14:02 GMT

ಹೊಸದಿಲ್ಲಿ: ಕಳೆದ 20 ದಿನಗಳಿಂದ ಭಾರತದಲ್ಲಿ ಹೊಸ ಕೋವಿಡ್ -19 ಪ್ರಕರಣಗಳಲ್ಲಿ ಸ್ಥಿರ ಕುಸಿತ ದಾಖಲಾಗಿದ್ದು, ಕಳೆದ ವಾರದಿಂದ 24 ರಾಜ್ಯಗಳಲ್ಲಿ  ಸಕ್ರಿಯ ಪ್ರಕರಣಗಳಲ್ಲಿ ಇಳಿಮುಖವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

" ಕೋವಿಡ್ -19 ರ ಎರಡನೇ ಅಲೆ  ಕುಸಿತ ಕಾಣುತ್ತಿದೆ. ನಿರ್ಬಂಧಗಳನ್ನು ಗಮನಾರ್ಹವಾಗಿ ಸಡಿಲಿಸಿದಾಗಲೂ ಅದನ್ನು ಉಳಿಸಿಕೊಳ್ಲುತ್ತೇವೆ ನಂಬಿಕೆ ನಮಗಿದೆ" ಎಂದು ಸಚಿವಾಲಯ ಹೇಳಿದೆ.

ಕೋವಿಡ್ -19 ಪರೀಕ್ಷೆಯು ಅನೇಕ ಪಟ್ಟು ಹೆಚ್ಚಾಗಿದ್ದರೆ, ಕಳೆದ ಮೂರು ವಾರಗಳಿಂದ ಸಾಪ್ತಾಹಿಕ ಕೋವಿಡ್ -19 ಸಕಾರಾತ್ಮಕ ದರದಲ್ಲಿ(ಪಾಸಿಟಿವಿಟಿ ರೇಟ್) ಸ್ಥಿರ ಕುಸಿತ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.

ಕೋವಿಡ್ ನ ಒಂದು ಹಾಗೂ ಎರಡನೇ ಡೋಸ್ ನಲ್ಲಿ ಬೇರೆ ಬೇರೆ ಲಸಿಕೆಗಳನ್ನು ತೆಗೆದುಕೊಂಡರೆ ಆಗುವ ಸಂಭವನೀಯ ಪ್ರತಿಕೂಲ ಪರಿಣಾಮ ಅಸಂಭವ. ಆದರೆ ಈ ನಿಟ್ಟಿನಲ್ಲಿ ನಮಗೆ ಹೆಚ್ಚಿನ ಪರಿಶೀಲನೆ ಹಾಗೂ ತಿಳುವಳಿಕೆ ಬೇಕು ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News