ರಾಮ್‌ ದೇವ್‌ ಸಮರ್ಪಕ ರೀತಿಯಲ್ಲಿ ತಮ್ಮ ಮಾತು ಹಿಂಪಡೆದರೆ, ಕೇಸ್, ಮಾನನಷ್ಟ ಮೊಕದ್ದಮೆ ಹಿಂಪಡೆಯುತ್ತೇವೆ"

Update: 2021-05-28 14:02 GMT

ಚೆನ್ನೈ: ಕೋವಿಡ್ -19 ಲಸಿಕೆಗಳು, ಆಧುನಿಕ ವೈದ್ಯಕೀಯ ಚಿಕಿತ್ಸೆಗಳ ಕುರಿತು ಹೇಳಿದ್ದ ಅವಹೇಳನಕಾರಿ ಮಾತುಗಳನ್ನು ಸಮರ್ಪಕವಾಗಿ ಹಿಂಪಡೆದರೆ ಉದ್ಯಮಿ ಮತ್ತು ಯೋಗ ಗುರು ರಾಮದೇವ್ ವಿರುದ್ಧದ ಪೊಲೀಸ್ ದೂರುಗಳನ್ನು ಮತ್ತು ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯುವ ಕುರಿತು ಭಾರತೀಯ ವೈದ್ಯಕೀಯ ಸಂಘವು ಪರಿಗಣಿಸಲಿದೆ ಎಂದು ಐಎಮ್‌ಎ ರಾಷ್ಟ್ರೀಯ ಮುಖ್ಯಸ್ಥ ಡಾ.ಜೆ. ಜಯಲಾಲ್‌ ಶುಕ್ರವಾರ ಹೇಳಿಕೆ ನೀಡಿದ್ದಾರೆ. 

ಈಗಿನ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಗಳನ್ನು ಗುರಿ ಮಾಡುವ ಮೂಲಕ ರಾಮದೇವ್‌ ಸರಕಾರವನ್ನೇ ಪ್ರಶ್ನಿಸಿದ್ದಾರೆ ಎಂದು ಅವರು ಹೇಳಿದರು.

ನಮಗೆ ಯೋಗಗುರು ರಾಮ್‌ ದೇವ್‌ ಕುರಿತಾದಂತೆ ಯಾವುದೇ ವಿರೋಧವಿಲ್ಲ. ಅವರ ಹೇಳಿಕೆಗಳು ಕೋವಿಡ್‌ ಗಿರುವ ಲಸಿಕೆಯ ವಿರುದ್ಧವಾಗಿದೆ. ಅವರ ಹೇಳಿಕೆಗಳು ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂಬಾಲಕರಿರುವುದು ಕೂಡಾ ನಮ್ಮನ್ನು ಕಳವಳಕ್ಕೀಡು ಮಾಡಿದೆ ಎಂದು ಅವರು ಹೇಳಿದರು.

ರಾಂ ದೇವ್‌ ಈಗಾಗಲೇ ಹೇಳಿಕೆ ಹಿಂಪಡೆದರೂ ಅದು ಸಮರ್ಪಕವಾದ ರೀತಿಯಲ್ಲಿ ನಡೆಸಬೇಕು ಎಂದು ಅವರು ಹೇಳಿದರು. ಸಮರ್ಪಕವಾದ ರೀತಿಯಲ್ಲಿ ರಾಮ್‌ ದೇವ್‌ ತಮ್ಮ ಹೇಳಿಕೆಯನ್ನು ಹಿಂಪಡೆದರೆ ರಾಮದೇವ್ ವಿರುದ್ಧದ ಪೊಲೀಸ್ ದೂರುಗಳನ್ನು ಮತ್ತು ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯುವ ಕುರಿತು ಭಾರತೀಯ ವೈದ್ಯಕೀಯ ಸಂಘವು ಪರಿಗಣಿಸಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News