×
Ad

ಹಿರಿಯ ಸಿಪಿಎಂ ನಾಯಕಿ ಮೈಥಿಲಿ ಶಿವರಾಮನ್ ಕೋವಿಡ್ -19ನಿಂದ ನಿಧನ

Update: 2021-05-30 22:21 IST
photo: Indian Express

ಚೆನ್ನೈ: ಸಿಪಿಎಂ ನಾಯಕಿ  ಹಾಗೂ  ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಶನ್  (ಎಐಡಿಡಬ್ಲ್ಯೂಎ) ಮಾಜಿ ಉಪಾಧ್ಯಕ್ಷೆ ಮೈಥಿಲಿ ಶಿವರಾಮನ್ ರವಿವಾರ ಚೆನ್ನೈನಲ್ಲಿ ನಿಧನರಾದರು. ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕು ದೃಢಪಟ್ಟಿತ್ತು. ರವಿವಾರ ಬೆಳಿಗ್ಗೆ ಅವರು ಚಿಕಿತ್ಸೆಯಲ್ಲಿದ್ದಾಗಲೇ ಮೃತಪಟ್ಟಿದ್ದಾರೆ.

ಮೈಥಿಲಿ ಅವರಿಗೆ 81 ವರ್ಷ ವಯಸ್ಸಾಗಿದ್ದು, ಪತಿ ಕರುಣಾಕರನ್ ಹಾಗೂ ಪುತ್ರಿ  ಕಲ್ಪನಾ ಕರುಣಾಕರನ್  ಅವರನ್ನು ಅಗಲಿದ್ದಾರೆ. ತನ್ನ ಬರಹಗಳ ಮೂಲಕ, ಪೂರ್ವ ತಂಜಾವೂರಿನ ಕೀಝ್ ವೇಮಣಿಯಲ್ಲಿ ನಡೆದ ದಲಿತರ ಹತ್ಯಾಕಾಂಡದ ಬಗ್ಗೆ ಅವರು ಜನರ ಗಮನ ಸೆಳೆದರು.

1937 ರಲ್ಲಿ ಜನಿಸಿದ ಮೈಥಿಲಿ ಶಿವರಾಮನ್ ಅವರು  ಉಮಾನಾಥ್ ಅವರೊಂದಿಗೆ ಎಐಡಿಡಬ್ಲ್ಯೂಎ ಸಹ-ಸ್ಥಾಪಿಸಿದರು. ಅವರು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಯೊಂದಿಗೆ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿದ್ದರು. ಅವರು ವಿಶ್ವಸಂಸ್ಥೆಯ ವಸಾಹತುಶಾಹಿ ವಿಶೇಷ ಸಮಿತಿಯಲ್ಲೂ ಕೆಲಸ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News