ಸರಕಾರಿ ನೌಕರರು ಲಸಿಕೆ ಪಡೆಯದಿದ್ದರೆ ವೇತನವಿಲ್ಲ: ಉತ್ತರಪ್ರದೇಶದಲ್ಲಿ ಜಿಲ್ಲಾಡಳಿತದ ಘೋಷಣೆ

Update: 2021-06-02 17:13 GMT

ಲಕ್ನೊ, ಜೂ.2: ಕೊರೋನ ಸೋಂಕಿನ ವಿರುದ್ಧದ ಲಸಿಕೀಕರಣ ಅಭಿಯಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರಪ್ರದೇಶದ ಫಿರೋಝಾಬಾದ್ ಜಿಲ್ಲಾಡಳಿತ ಹೊರಡಿಸಿರುವ ಆದೇಶದಲ್ಲಿ, ಸರಕಾರಿ ನೌಕರರು ಲಸಿಕೆ ಹಾಕಿಸಿಕೊಳ್ಳದಿದ್ದರೆ ವೇತನ ಪಾವತಿಸುವುದಿಲ್ಲ ಎಂದು ಸೂಚಿಸಲಾಗಿದೆ. 

ಲಸಿಕೆ ಇಲ್ಲದಿದ್ದರೆ ವೇತನವೂ ಇಲ್ಲ ಎಂಬ ಮೌಖಿಕ ಆದೇಶವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರವಿಜಯ್ ಸಿಂಗ್ ಹೊರಡಿಸಿದ್ದಾರೆ . ಈ ಆದೇಶದ ಪ್ರಕಾರ, ಲಸಿಕೆ ಪಡೆಯದ ನೌಕರರ ತಿಂಗಳ ವೇತನ ತಡೆಹಿಡಿಯುವ ಜೊತೆಗೆ ಇಲಾಖಾ ಕ್ರಮವನ್ನೂ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಹೇಳಿದ್ದಾರೆ. ಆದೇಶ ಜಾರಿಗೊಳಿಸುವಂತೆ ಜಿಲ್ಲಾ ಖಜಾನಾಧಿಕಾರಿಗೆ ಮತ್ತು ವಿಭಾಗೀಯ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ. 

ಜೊತೆಗೆ, ಲಸಿಕೆ ಪಡೆದವರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ವೇತನಕ್ಕೆ ತಡೆಯಾಗಬಹುದು ಎಂಬ ಭಯದಿಂದ ಸಿಬಂದಿಗಳು ಲಸಿಕೆ ಪಡೆಯುತ್ತಾರೆ ಎಂದು ಅಧಿಕಾರಿಗಳು ಹೇಳಿರುವುದಾಗಿ NDTV ಸುದ್ದಿಸಂಸ್ಥೆ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News