ವೆಂಕಯ್ಯ ನಾಯ್ಡು ಬಳಿಕ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಟ್ವಿಟರ್‌ ಖಾತೆಯ ʼಬ್ಲೂ ಟಿಕ್‌ʼ ತೆರವು

Update: 2021-06-05 07:42 GMT

ಹೊಸದಿಲ್ಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರವರ ಟ್ವಿಟರ್‌ ಖಾತೆಯಿಂದ ಬ್ಲೂಟಿಕ್‌ ಅಥವಾ ವೆರಿಫೈಡ್‌ ಬ್ಯಾಡ್ಜ್‌ ಅನ್ನು ಕೆಲ ಗಂಟೆಗಳ ಕಾಲ ಟ್ವಿಟರ್‌ ತೆಗೆದು ಹಾಕಿದ ಬಳಿಕ ಮರುಸ್ಥಾಪಿಸಿತ್ತು. ಇದೀಗ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ರವರ ಅಧಿಕೃತ ಖಾತೆಯ ವೆರಿಫೈಡ್‌ ಬ್ಯಾಡ್ಜ್‌ ಅನ್ನು ಟ್ವಿಟರ್‌ ತೆರವುಗೊಳಿಸಿದ ಘಟನೆ ನಡೆದಿದೆ.

ವೆಂಕಯ್ಯ ನಾಯ್ಡು ರ ಖಾತೆಯ ಕುರಿತಾದಂತೆ ಮಾತನಾಡಿದ್ದ ಅಧಿಕೃತ ಅಧಿಕಾರಿಗಳು, ಖಾತೆಯು ಕೆಲ ದಿನಗಲ ಕಾಲ ನಿಷ್ಕ್ರಿಯವಾಗಿದ್ದ ಕಾರಣ ಟ್ವಿಟರ್‌ ಅಲ್ಗೋರಿದಮ್‌ ಪ್ರಕಾರ ವೆರಿಫೈಡ್‌ ಬ್ಯಾಡ್ಜ್‌ ಅನ್ನು ತೆರವುಗೊಳಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದರು.

ಇಂದು ಬೆಳಗ್ಗೆ ಮೋಹನ್‌ ಭಾಗವತ್‌ ರ ಟ್ವಿಟರ್‌ ಖಾತೆಯಿಂದ ಬ್ಲೂಟಿಕ್‌ ಮರೆಯಾಗಿದ್ದು, ಇದುವರೆಗೂ ಮರುಸ್ಥಾಪಿಸಿಲ್ಲ ಎಂದು ತಿಳಿದು ಬಂದಿದೆ. ಮೋಹನ್‌ ಭಾಗವತ್‌ ಮಾತ್ರವಲ್ಲದೇ ಕೃಷ್ಣ ಗೋಪಾಲ್‌, ಅರುಣ್‌ ಕುಮಾರ್‌ ಹಾಗೂ ಸುರೇಶ್‌ ಜೋಶಿ ಎಂಬ ಆರೆಸ್ಸೆಸ್‌ ಮುಖಂಡರ ಖಾತೆಯ ಬ್ಲೂಟಿಕ್‌ ಅನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News