ಫ್ರೆಂಚ್ ಓಪನ್ ನಿಂದ ಹಿಂದೆ ಸರಿದ ರೋಜರ್ ಫೆಡರರ್

Update: 2021-06-06 15:21 GMT

ಪ್ಯಾರಿಸ್: ವಿಶ್ವದ ಮಾಜಿ ನಂ.1 ಆಟಗಾರ, ಸ್ವಿಸ್ ಟೆನಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿನ ಪಂದ್ಯವನ್ನು ಪ್ರಯಾಸದಿಂದ ಗೆಲುವು  ಸಾಧಿಸಿದ ಮರುದಿನ  ಫ್ರೆಂಚ್ ಓಪನ್‌ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಘೋಷಿಸುವುದರೊಂದಿಗೆ ಅಚ್ಚರಿ ಮೂಡಿಸಿದರು.

"ನನ್ನ ತಂಡದೊಂದಿಗೆ ಚರ್ಚಿಸಿದ ನಂತರ, ನಾನು ಇಂದು ಫ್ರೆಂಚ್ ಓಪನ್ ನಿಂದ ಹಿಂದೆ ಸರಿಯಲು  ನಿರ್ಧರಿಸಿದ್ದೇನೆ" ಎಂದು 39 ವರ್ಷದ ಫೆಡರರ್ ಫ್ರೆಂಚ್ ಟೆನಿಸ್ ಒಕ್ಕೂಟ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

"ಎರಡು ಬಾರಿ ಮೊಣಕಾಲು ಶಸ್ತ್ರಚಿಕಿತ್ಸೆಗಳ ಬಳಿಕ ಹಾಗೂ ಆಪರೇಶನ್ ನಿಂದ ಚೇತರಿಸಿಕೊಂಡ  ಒಂದು ವರ್ಷದ ನಂತರ ನಾನು ನನ್ನ ಶರೀರದ ಮಾತನ್ನು ಆಲಿಸುವುದು ಮತ್ತು ಚೇತರಿಕೆಯ ಹಾದಿಯಲ್ಲಿ ನಾನು ಬೇಗನೆ ಮುನ್ನುಗ್ಗದೆ ಇರುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ  ಎಂದು ಫೆಡರರ್ ಟ್ವೀಟಿಸಿದ್ದಾರೆ.

ಫೆಡರರ್  ಶನಿವಾರ ತಡರಾತ್ರಿ ಜರ್ಮನಿಯ ಡೊಮಿನಿಕ್ ಕೋಪ್ ಫೆರ್ ವಿರುದ್ಧ ಪ್ರಯಾಸದ ಜಯ ಸಾಧಿಸಿದರು. ನಾಲ್ಕನೇ ಸುತ್ತಿನಲ್ಲಿ ಇಟಲಿಯ ಮಟ್ಟೆವೊ ಬೆರ್ರೆಟ್ಟಿನಿ ವಿರುದ್ಧ ಆಡುವುದರಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News