ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬದಲಾವಣೆ

Update: 2021-06-07 15:13 GMT
ಸಾಂದರ್ಭಿಕ ಚಿತ್ರ

 ಹೊಸದಿಲ್ಲಿ,ಜೂ.7: 12ನೇ ತರಗತಿಯ ಬಾಕಿಯುಳಿದಿರುವ ಪ್ರಾಕ್ಟಿಕಲ್ ಮತ್ತು ಆಂತರಿಕ ಮೌಲ್ಯಮಾಪನವನ್ನು ಆನ್ ಲೈನ್ ವಿಧಾನದಲ್ಲಿ ಮಾತ್ರವೇ ಪೂರ್ಣಗೊಳಿಸುವಂತೆ ಮತ್ತು ಅದನ್ನು ಜೂ.28ರೊಳಗೆ ವೆಬ್ಸೈಟ್ ಗೆ ಅಪ್ ಲೋಡ್ ಮಾಡುವಂತೆ ಸಿಬಿಎಸ್ಇ ಸೋಮವಾರ ತನ್ನ ಅಧೀನದ ಶಾಲೆಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದೆ.

ಬಾಹ್ಯ ಪರೀಕ್ಷಕರು ನೇಮಕಗೊಂಡಿರದ ವಿಷಯಗಳಲ್ಲಿ ಸಂಬಂಧಿಸಿದ ಶಾಲಾ ಶಿಕ್ಷಕರು ಪಠ್ಯಕ್ರಮದಲ್ಲಿ ನೀಡಿರುವ ಸೂಚನೆಗಳ ಆಧಾರದಲ್ಲಿ ಆನ್ಲೈನ್ ನಲ್ಲಿ ಆಂತರಿಕ ಮೌಲ್ಯಮಾಪನವನ್ನು ನಡೆಸಬೇಕು ಮತ್ತು ಅಂಕಗಳನ್ನು ಮಂಡಳಿಯು ಒದಗಿಸಿರುವ ಲಿಂಕ್ ನಲ್ಲಿ ಅಪ್ಲೋಡ್ ಮಾಡಬೇಕು. ಬಾಹ್ಯ ಪರೀಕ್ಷಕರು ನೇಮಕಗೊಂಡಿರುವ ವಿಷಯಗಳಲ್ಲಿ ಅವರು ಆಂತರಿಕ ಪರೀಕ್ಷಕರೊಂದಿಗೆ ಸಮಾಲೋಚಿಸಿ ಪರೀಕ್ಷೆಯ ದಿನಾಂಕವನ್ನು ನಿಗದಿಗೊಳಿಸಬೇಕು ಮತ್ತು ಆನ್ಲೈನ್ ವಿಧಾನದಲ್ಲಿ ಮೌಖಿಕ ಪರೀಕ್ಷೆಯನ್ನು ನಡೆಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

2021ನೇ ಸಾಲಿನ 12ನೇ ತರಗತಿ ಪರೀಕ್ಷೆಗಳಿಗೆ ಹೆಸರುಗಳನ್ನು ನೊಂದಾಯಿಸಿಕೊಂಡಿರುವ ಖಾಸಗಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್/ಪ್ರಾಜೆಕ್ಟ್/ಆಂತರಿಕ ಮೌಲ್ಯಮಾಪನಕ್ಕಾಗಿ ಶೀಘ್ರವೇ ನೀತಿಯನ್ನು ಘೋಷಿಸಲಾಗುವುದು ಎಂದು ಸಿಬಿಎಸ್ಇ ತಿಳಿಸಿದೆ. 12ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಮಾನದಂಡಗಳನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಅದು 10 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News