ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಗೆ ಎರಡನೇ ಅವಧಿ: ಭದ್ರತಾ ಮಂಡಳಿ ಮತ

Update: 2021-06-09 16:47 GMT

photo:twitter (@antonioguterres)

ವಿಶ್ವಸಂಸ್ಥೆ (ನ್ಯೂಯಾರ್ಕ್), ಜೂ. 9: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ಗೆ ಎರಡನೇ ಅವಧಿ ನೀಡುವ ಪ್ರಸ್ತಾವದ ಪರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ಮತ ಹಾಕಿದೆ.

ಪೋರ್ಚುಗಲ್ ನ 72 ವರ್ಷದ ಮಾಜಿ ಪ್ರಧಾನಿ 2017ರಿಂದ ಅಧಿಕಾರದಲ್ಲಿದ್ದಾರೆ, ಅವರು ಎರಡನೇ ಅವಧಿಗಾಗಿ ಸ್ಪರ್ಧಿಸುತ್ತಿದ್ದು, ಅವರಿಗೆ ಯಾರೂ ಎದುರಾಳಿಗಳಿಲ್ಲ.
ಇತರ ಸುಮಾರು 10 ಮಂದಿ ಈ ಹುದ್ದೆಯ ಆಕಾಂಕ್ಷಿಗಳಾಗಿದ್ದರೂ, ಅವರು ಯಾರೂ ಅಧಿಕೃತ ಅಭ್ಯರ್ಥಿಗಳಾಗಿರಲಿಲ್ಲ. ಯಾಕೆಂದರೆ ವಿಶ್ವಸಂಸ್ಥೆಯ 193 ಸದಸ್ಯ ದೇಶಗಳ ಪೈಕಿ ಯಾವ ದೇಶವೂ ಅವರನ್ನು ಅನುಮೋದಿಸಿರಲಿಲ್ಲ.

ಈ ನಿರ್ಣಯವನ್ನು ಇನ್ನು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಔಪಚಾರಿಕವಾಗಿ ಅನುಮೋದಿಸಬೇಕಾಗಿದೆ. ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News