1.33 ಕೋಟಿಗೂ ಅಧಿಕ ಡೋಸ್ ಲಸಿಕೆ ರಾಜ್ಯಗಳ ಬಳಿಯಿದೆ: ಕೇಂದ್ರ ಸರಕಾರ
Update: 2021-06-09 23:32 IST
ಹೊಸದಿಲ್ಲಿ, ಜೂ.9: ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1.33 ಡೋಸ್ ಲಸಿಕೆ ಉಳಿದಿದೆ. ಮುಂದಿನ 3 ದಿನದೊಳಗೆ 3 ಲಕ್ಷಕ್ಕೂ ಅಧಿಕ ಡೋಸ್ಗಳನ್ನು ಪೂರೈಸಲಾಗುವುದು ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ.
ಇದುವರೆಗೆ ರಾಜ್ಯಗಳಿಗೆ ನೇರ ಹಂಚಿಕೆ ವಿಭಾಗದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 25 ಕೋಟಿ ಡೋಸ್ ಗೂ ಅಧಿಕ ಲಸಿಕೆ ಒದಗಿಸಿದ್ದು ಇದರಲ್ಲಿ ವ್ಯರ್ಥವಾದ ಲಸಿಕೆ ಸೇರಿ ಒಟ್ಟು 23,74,21,088 ಡೋಸ್ ಲಸಿಕೆ ಬಳಕೆಯಾಗಿದೆ. 1,33,68,727 ಡೋಸ್ ಲಸಿಕೆ ಉಳಿದಿದೆ ಎಂದು ಕೇಂದ್ರ ಹೇಳಿದೆ. ಮುಂದಿನ 3 ದಿನದಲ್ಲಿ 3,81,750 ಡೋಸ್ ಲಸಿಕೆ ರಾಜ್ಯ./ಕೇಂದ್ರಾಡಳಿತ ಪ್ರದೇಶಗಳ ಕೈಸೇರಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.