ಅಮೆರಿಕ: ಪ್ರತಿ ಇಬ್ಬರಲ್ಲಿ ಒಬ್ಬ ಭಾರತೀಯ ತಾರತಮ್ಯಕ್ಕೆ ಒಳಗಾಗುತ್ತಿದ್ದಾನೆ: ಸಮೀಕ್ಷೆ

Update: 2021-06-10 17:03 GMT
photo : Twitter(@Rugball)

ವಾಶಿಂಗ್ಟನ್, ಜೂ. 10: ಅಮೆರಿಕದಲ್ಲಿ ಎರಡನೇ ಅತಿ ದೊಡ್ಡ ವಲಸಿಗ ಗುಂಪಾಗಿರುವ ಭಾರತೀಯ ಅಮೆರಿಕನ್ನರು ನಿಯಮಿತವಾಗಿ ತಾರತಮ್ಯ ಮತ್ತು ಧ್ರುವೀಕರಣವನ್ನು ಎದುರಿಸುತ್ತಿದ್ದಾರೆ ಎಂದು ಬುಧವಾರ ಬಿಡುಗಡೆಗೊಂಡ ಸಮೀಕ್ಷೆಯೊಂದು ತಿಳಿಸಿದೆ.

ಕಾರ್ನೆಜೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಶನಲ್ ಪೀಸ್, ಜಾನ್ಸ್ ಹಾಪ್ಕಿನ್ಸ್-ಎಸ್ಎಐಎಸ್ ಮತ್ತು ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯಗಳು ಜಂಟಿಯಾಗಿ ನಡೆಸಿದ ಇಂಡಿಯನ್-ಅಮೆರಿಕನ್ ಆ್ಯಟಿಟ್ಯೂಡ್ಸ್ ಸರ್ವೆ (ಐಎಎಎಸ್)ಯ ವರದಿಯು ಈ ಅಭಿಪ್ರಾಯಕ್ಕೆ ಬಂದಿದೆ.

ಈ ಸಮೀಕ್ಷೆಯ ವೇಳೆ, 1,200 ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ-ಅಮೆರಿಕನ್ನರನ್ನು ಆನ್ಲೈನ್ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮೀಕ್ಷೆಯನ್ನು2020 ಸೆಪ್ಟಂಬರ್ 1ರಿಂದ 20ರವರೆಗೆ ನಡೆಸಲಾಗಿತ್ತು.

‘‘ಭಾರತೀಯ-ಅಮೆರಿಕನ್ನರು ನಿಯಮಿತವಾಗಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ತಾನು ತಾರತಮ್ಯಕ್ಕೆ ಒಳಗಾಗಿರುವುದಾಗಿ ಇಬ್ಬರು ಭಾರತೀಯ ಅಮೆರಿಕನ್ನರ ಪೈಕಿ ಒಬ್ಬ ಹೇಳಿದ್ದಾರೆ. ಚರ್ಮದ ಬಣ್ಣದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ಅತ್ಯಂತ ಸಾಮಾನ್ಯ ತಾರತಮ್ಯ ಎಂಬುದಾಗಿ ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News