ಆಹಾರ ಆಮದು ವೆಚ್ಚ ದಾಖಲೆ ಮಟ್ಟಕ್ಕೆ ಏರಿಕೆಯು ಬಡ ದೇಶಗಳಿಗೆ ಬೆದರಿಕೆ: ಆಹಾರ ಮತ್ತು ಕೃಷಿ ಸಂಘಟನೆ

Update: 2021-06-10 16:43 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್ (ಫ್ರಾನ್ಸ್), ಜೂ. 10: ಜಗತ್ತಿನಾದ್ಯಂತ ಆಹಾರ ಆಮದು ವೆಚ್ಚ ಈ ವರ್ಷ ದಾಖಲೆ ಮಟ್ಟಕ್ಕೆ ಏರುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಆಹಾರ ಸಂಸ್ಥೆ ಗುರುವಾರ ಹೇಳಿದೆ. ಇದು ಕೋವಿಡ್-19 ಸಾಂಕ್ರಾಮಿಕದಿಂದ ಈಗಾಗಲೇ ಜರ್ಝರಿತವಾಗಿರುವ ಹಲವಾರು ಬಡ ದೇಶಗಳ ಮೇಲೆ ಅಗಾಧ ಒತ್ತಡವನ್ನು ಹೇರಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

‌ಬಹುತೇಕ ಎಲ್ಲ ಕೃಷಿ ಉತ್ಪನ್ನಗಳು ಹೆಚ್ಚೆಚ್ಚು ದುಬಾರಿಯಾಗುತ್ತಿರುವುದರಿಂದ ಆಹಾರ ಉತ್ಪನ್ನಗಳ ಆಮದು ವೆಚ್ಚ ಏರಿಕೆ ದೀರ್ಘಾವಧಿಯವರೆಗೆ ಮುಂದುವರಿಯಬಹುದಾಗಿದೆ ಎಂದು ಆಹಾರ ಮತ್ತು ಕೃಷಿ ಸಂಘಟನೆ (ಎಫ್ಎಒ) ಹೇಳಿದೆ. ಅದೇ ವೇಳೆ, ಇಂಧನ ಬೆಲೆಗಳಲ್ಲಿ ಏರಿಕೆಯಾಗುತ್ತಿರುವುದರಿಂದ ರೈತರ ಉತ್ಪಾದನಾ ವೆಚ್ಚವೂ ಏರಲಿದೆ ಎಂದಿದೆ.

‘‘ಜಗತ್ತು ಬೆಲೆಯೇರಿಕೆಯನ್ನು ಎದುರಿಸುತ್ತಿರುವುದು ಈಗಿನ ಪ್ರಶ್ನೆಯಲ್ಲ. ಬೆಲೆಯನ್ನು ಭರಿಸಲು ಸಾಧ್ಯವಾಗದ ಬಡ ದೇಶಗಳು ಏನು ಮಾಡಬೇಕು ಎನ್ನುವುದು ಈಗಿನ ಪ್ರಶ್ನೆಯಾಗಿದೆ’’ ಎಂದು ಎಫ್ಎಒದ ವ್ಯಾಪಾರ ಮತ್ತು ಮಾರುಕಟ್ಟೆ ವಿಭಾಗದ ಉಪ ನಿರ್ದೇಶಕ ಜೋಸೆಫ್ ಶ್ಮೈದುಬರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News