ಒಎನ್ ಜಿಸಿ, ಒಐಎಲ್ ನ ಪ್ರಮುಖ ತೈಲ, ಅನಿಲ ನಿಕ್ಷೇಪಗಳನ್ನು ಕೇಂದ್ರ ಸರಕಾರ ಹರಾಜು ಹಾಕಲಿದೆ: ಧರ್ಮೇಂದ್ರ ಪ್ರಧಾನ್

Update: 2021-06-10 18:09 GMT

ಹೊಸದಿಲ್ಲಿ, ಜೂ. 10: ದೇಶದ ಹೈಡ್ರೋಕಾರ್ಬನ್ ಉತ್ಪಾದನೆಗೆ ಉತ್ತೇಜನ ನೀಡಲು ರಾಷ್ಟ್ರ ಸ್ವಾಮಿತ್ವದ ಒಎನ್ಜಿಸಿ ಹಾಗೂ ಒಐಎಲ್ನ ಮಾರಾಟವಾಗದ ದೊಡ್ಡ ತೈಲ ಹಾಗೂ ಅನಿಲ ನಿಕ್ಷೇಪಗಳನ್ನು ಕೇಂದ್ರ ಸರಕಾರ ಹರಾಜು ಮಾಡಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ಹೇಳಿದ್ದಾರೆ. 

ಪತ್ತೆಯಾದ ಸಣ್ಣ ನಿಕ್ಷೇಪಗಳ ಮೂರನೇ ಸುತ್ತಿನ ಹರಾಜಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂಪೆನಿಗಳು ತಾವು ಪತ್ತೆ ಮಾಡಿದ ಸಂಪನ್ಮೂಲಗಳಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಸಂಪನ್ಮೂಲ ವಾಸ್ತವವಾಗಿ ರಾಷ್ಟ್ರಕ್ಕೆ ಸೇರಿದ್ದು. ಆಸಕ್ತ ಸಂಸ್ಥೆಗಳಿಗೆ ಹರಾಜಿನ ಮೂಲಕ ಅವುಗಳನ್ನು ಮಾರಾಟ ಮಾಡಬಹುದು ಎಂದು ಅವರು ಹೇಳಿದರು. 

ಪತ್ತೆ ಮಾಡಲಾದ 75ರಲ್ಲಿ 32ಕ್ಕೂ ಅಧಿಕ ತೈಲ ಹಾಗೂ ಅನಿಲ ನಿಕ್ಷೇಪಗಳನ್ನು ‘ಪತ್ತೆಯಾದ ಸಣ್ಣ ನಿಕ್ಷೇಪ (ಡಿಎಸ್ಎಫ್) ಸುತ್ತು 3’ರಲ್ಲಿ ಹರಾಜು ಮಾಡಲಾಗುವುದು ಎಂದು ಅವರು ತಿಳಿಸಿದರು. 

ಈ ಸಣ್ಣ ಹಾಗೂ ಮಧ್ಯಮ ನಿಕ್ಷೇಪಗಳನ್ನು ರಾಷ್ಟ್ರ ಸ್ವಾಮಿತ್ವದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ (ಒಎನ್ಜಿಸಿ) ಹಾಗೂ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಪತ್ತೆ ಮಾಡಿದೆ. ಆದರೆ, ವಿತ್ತ ವ್ಯವಸ್ಥೆ ಹಾಗೂ ಸಣ್ಣ ಗಾತ್ರದ ಕಾರಣಕ್ಕೆ ಈ ನಿಕ್ಷೇಪಕಗಳನ್ನು ಅಭಿವೃದ್ಧಿಪಡಿಸಲು ಅವುಗಳಿಗೆ ಆರ್ಥಿಕವಾಗಿ ಕಾರ್ಯಸಾಧುವಾಗಲಾರದು ಎಂದು ಅವರು ಹೇಳಿದ್ದಾರೆ. 

‘‘ಮುಂದಿನ ಬಾರಿ ಡಿಎಸ್ಎಫ್ ಇರುವುದಿಲ್ಲ. ಮುಂದಿನ ಬಾರಿ, ಅದು ಪ್ರಮುಖ ಸುತ್ತು (ದೊಡ್ಡ ನಿಕ್ಷೇಪಗಳ ಹರಾಜು)ಆಗಿರುತ್ತದೆ’’ ಎಂದು ಧರ್ಮೇಂದ್ರ ಪ್ರಧಾನ್ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News