ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಕೆನ್ನೆಗೆ ಬಾರಿಸಿದಾತನಿಗೆ 4 ತಿಂಗಳು ಜೈಲು

Update: 2021-06-11 17:14 GMT

ಪ್ಯಾರಿಸ್ (ಫ್ರಾನ್ಸ್), ಜೂ. 11: ಈ ವಾರ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ರ ಕೆನ್ನೆಗೆ ಹೊಡೆದಿದ್ದ ವ್ಯಕ್ತಿಗೆ ನ್ಯಾಯಾಲಯವೊಂದು ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಬಿಎಫ್ಎಮ್ ಟಿವಿ ವರದಿ ಮಾಡಿದೆ.


ಮಂಗಳವಾರ ದಕ್ಷಿಣ ಫ್ರಾನ್ಸ್ ನ ಡ್ರೋಮ್ ವಲಯಕ್ಕೆ ಭೇಟಿ ನೀಡಿದ್ದ ಮ್ಯಾಕ್ರೋನ್ ಸಭೆಯೊಂದರಲ್ಲಿ ಜನರಿಗೆ ಕೈಕುಲುಕಲು ಹೋಗಿದ್ದಾಗ 28 ವರ್ಷದ ಡೇಮಿಯನ್ ಟಾರೆಲ್ ಅವರ ಕೆನ್ನೆಗೆ ಹೊಡೆದಿದ್ದನು. ನಿರುದ್ಯೋಗಿಯಾಗಿದ್ದ ಡೇಮಿಯನ್ ಮಧ್ಯಯುಗದ ಕತ್ತಿವರಸೆಯ ಅಭಿಮಾನಿಯಾಗಿದ್ದಾನೆ.

ಅವನಿಗೆ ನ್ಯಾಯಾಲಯವು 18 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತು, ಆದರೆ ಆ ಪೈಕಿ 14 ತಿಂಗಳುಗಳ ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿತು ಎಂದು ಟಿವಿ ಹೇಳಿದೆ.

ಫ್ರಾನ್ಸ್ ನ ಎಲ್ಲ ಕೆಟ್ಟ ವಿಷಯಗಳಿಗೆ ಮ್ಯಾಕ್ರೋನ್ ಬೆಂಬಲ ನೀಡುತ್ತಾರೆ, ಅದಕ್ಕಾಗಿ ನಾನು ಅವರಿಗೆ ಹೊಡೆದೆ ಎಂದು ಆರೋಪಿಯು ಹೇಳಿದ್ದಾನೆ. ತಾನು ಬಲಪಂಥೀಯರ ಪರ ಸಹಾನುಭೂತಿ ಹೊಂದಿದವನು ಎಂಬುದಾಗಿಯೂ ಅವನು ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News