ಬಾವಲಿಗಳಲ್ಲಿ ಹೊಸ ಕೊರೋನ ವೈರಸ್ಗಳನ್ನು ಪತ್ತೆಹಚ್ಚಿದ ಚೀನೀ ಸಂಶೋಧಕರು

Update: 2021-06-12 16:46 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಜೂ. 12: ಕೋವಿಡ್-19 ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವಂತೆಯೇ, ತಾವು ಬಾವಲಿಗಳಲ್ಲಿ ಹೊಸ ಕೊರೋನ ವೈರಸ್ಗಳನ್ನು ಪತ್ತೆಹಚ್ಚಿದ್ದೇವೆ ಎಂದು ಚೀನಾದ ಸಂಶೋಧಕರು ಹೇಳಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ವೈರಸ್ ಗಳ ಪೈಕಿ ಒಂದು ವೈರಸ್, ವಂಶವಾಹಿಯಾಗಿ ಕೋವಿಡ್-19 ವೈರಸ್ ಗೆ ಎರಡನೇ ಅತ್ಯಂತ ನಿಕಟವಾಗಿರುವ ವೈರಸ್ ಆಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

ಬಾವಲಿಗಳಲ್ಲಿ ಎಷ್ಟು ಕೊರೋನ ವೈರಸ್ ಗಳಿವೆ ಮತ್ತು ಎಷ್ಟು ವೈರಸ್ ಗಳಿಗೆ ಜನರಿಗೆ ಹರಡುವ ಸಾಮರ್ಥ್ಯವಿದೆ ಎನ್ನುವುದನ್ನು ನೈರುತ್ಯ ಚೀನಾದಲ್ಲಿ ತಾವು ನಡೆಸಿದ ಸಂಶೋಧನೆಗಳು ತೋರಿಸಿವೆ ಎಂದು ಸಂಶೋಧಕರು ಹೇಳುತ್ತಾರೆ.

‘‘ಬಾವಲಿಗಳ ವಿವಿಧ ಪ್ರಭೇದಗಳಿಂದ ನಾವು ಒಟ್ಟು 24 ನೋವೆಲ್ ಕೊರೋನ ವೈರಸ್ ವಂಶವಾಹಿಗಳನ್ನು ಸಂಗ್ರಹಿಸಿದ್ದೇವೆ. ಇದರಲ್ಲಿ ನಾಲ್ಕು ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಸಾರ್ಸ್-ಕೊವ್-2ರಂಥ ಕೊರೋನ ವೈರಸ್ಗಳಿವೆ’’ ಎಂಬುದಾಗಿ ‘ಸೆಲ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯೊಂದರಲ್ಲಿ ಚೀನಾದ ಶಾಂಡಾಂಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News