ದರೋಡೆಕೋರರಿಂದ ನಗದು, 13 ಕೆ.ಜಿ ಚಿನ್ನದ ಬಿಸ್ಕೆಟ್‌ ವಶ: ʼಸುಪ್ರೀಂಕೋರ್ಟ್‌ ಲಾಯರ್ʼ ಹೆಸರು ಉಲ್ಲೇಖಿಸಿದ ಪೊಲೀಸರು

Update: 2021-06-13 17:38 GMT

ಇತ್ತೀಚೆಗೆ ನೋಯ್ಡಾ ಪೊಲೀಸರು 57ಲಕ್ಷ ರೂ. ಸೇರಿದಂತೆ 1 ಕೋಟಿ ಬೆಲೆಬಾಳುವ ಜಮೀನಿನ ದಾಖಲೆಪತ್ರಗಳು ಹಾಗೂ 13.09 ಕೆ.ಜಿಗಳಷ್ಟು ಚಿನ್ನದ ಬಿಸ್ಕೆಟ್‌ ಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ʼಸುಪ್ರೀಂ ಕೋರ್ಟ್‌ ನ್ಯಾಯವಾದಿʼ ಎಂದು ಹೇಳಿಕೊಂಡಿರುವ ಕಿಸ್ಲೇ ಪಾಂಡೆ ಎಂಬಾತನನ್ನು ಹೆಸರಿಸಿದ್ದು ಸದ್ಯ ಚರ್ಚೆಗೀಡಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲಿನ ಆರೋಪಗಳನ್ನು ಪಾಂಡೆ ತಿರಸ್ಕರಿಸಿದ್ದಾರೆ.

ವರದಿಗಳ ಪ್ರಕಾರ, ನೋಯ್ಡಾದ ಸಿಲ್ವರ್ ಸಿಟಿ ಹೌಸಿಂಗ್ ಸೊಸೈಟಿಯ ಫ್ಲ್ಯಾಟ್‌ನಿಂದ ದೊಡ್ಡ ಪ್ರಮಾಣದ ಚಿನ್ನ, ಆಸ್ತಿ ದಾಖಲೆಗಳು ಮತ್ತು ನಗದು ಕಳವು ಮಾಡಲಾಗಿದೆ. ಆದರೆ, ದರೋಡೆಗೆ ಒಳಗಾದ ಆರು ಜನರನ್ನು ಬಂಧಿಸಲು ನೋಯ್ಡಾ ಪೊಲೀಸರು ಯಶಸ್ವಿಯಾಗಿದ್ದು, ಚಿನ್ನದ ಬಿಸ್ಕತ್ತು, ದಾಖಲೆಗಳು ಸೇರಿದಂತೆ 8.25 ಕೋಟಿ ರೂ,ಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದರೋಡೆಯ ಬಳಿಕ ತಮ್ಮಲ್ಲಿಯೇ ನಗ ನಗದುಗಳನ್ನು ಹಂಚಿಕೊಂಡು ಹಾಯಾಗಿದ್ದರು ಎನ್ನಲಾಗಿದೆ ಬಳಿಕ ಇವರ ನಡುವೆಯೇ ಹಂಚಿಕೆಯ ಕುರಿತು ತಕರಾರೆದ್ದ ಕಾರಣ ಸದ್ಯ ಪ್ರಕರಣ ಬಯಲಾಗಿದೆ. 

ಕಿಸ್ಲೇ ಪಾಂಡೆ ತನ್ನ ಟ್ವಿಟರ್‌ ಬಯೋನಲ್ಲಿ ʼಸುಪ್ರೀಂ ಕೋರ್ಟ್‌ ಲಾಯರ್‌ʼ ಎಂದು ನಮೂದಿಸಿದ್ದಾರೆ. ಪಾಂಡೆ ಹಾಗೂ ಆತನ ತಂದೆಯ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ವಿಚಾರಣೆ ನಡೆಸಲು ಅವರಿಬ್ಬರೂ ಸದ್ಯ ಭಾರತದಲ್ಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. "ಸಾರ್ವಜನಿಕ ಹಣವನ್ನು ತಿಂದು ತೇಗಿರುವ ಹಗರಣಕಾರರು ನನ್ನ ವಿರುದ್ಧ ದ್ವೇಷ ಅಭಿಯಾನ ನಡೆಸುತ್ತಿದ್ದಾರೆ" ಎಂದು ಪಾಂಡೆ ಟ್ವಿಟರ್‌ ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News