ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವಿಜೇತ ತಂಡಕ್ಕೆ ಬಹುಮಾನ ಮೊತ್ತ ಎಷ್ಟು ಗೊತ್ತೇ?

Update: 2021-06-14 15:23 GMT

ಲಂಡನ್: ಸೌತಾಂಪ್ಟನ್‌ನಲ್ಲಿ ಜೂನ್ 18ರಿಂದ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಹಾಗೂ  ನ್ಯೂಝಿಲ್ಯಾಂಡ್  ಹಣಾಹಣಿ ನಡೆಸಲು  ಸಜ್ಜಾಗಿವೆ.

ಇತ್ತೀಚೆಗೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಈ ಎರಡು ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ವಿಶ್ವದಾದ್ಯಂತದ ಅಭಿಮಾನಿಗಳು ಬ್ಯಾಟ್ ಹಾಗೂ  ಚೆಂಡಿನ ನಡುವೆ ನಿಕಟ ಸ್ಪರ್ಧೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ವಾಸ್ತವವಾಗಿ, ಐಸಿಸಿ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ನ್ಯೂಝಿಲ್ಯಾಂಡ್ ಹಾಗೂ  ಭಾರತ ಕ್ರಮವಾಗಿ ಮೊದಲ ಹಾಗೂ  ಎರಡನೇ ಸ್ಥಾನವನ್ನು ಪಡೆದಿವೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ವಿಜೇತ ತಂಡ ಪ್ರತಿಷ್ಠಿತ ಟ್ರೋಫಿಯ ಜೊತೆಗೆ, ಭಾರೀ ಮೊತ್ತವನ್ನು ಬಾಚಿಕೊಳ್ಳಲಿದೆ.  ಚಾಂಪಿಯನ್ ಶಿಪ್  ವಿಜೇತರಿಗೆ 1.6 ಮಿಲಿಯನ್ ಅಮೆರಿಕನ್ ಡಾಲರ್  (11.7 ಕೋ.ರೂ.) ಬಹುಮಾನದ ಮೊತ್ತವನ್ನು ನೀಡಲಾಗುವುದು ಎಂದು ಅಂತರ್ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಸಿಇಒ ಜೆಫ್ ಅಲಾರ್ಡಿಸ್ ಘೋಷಿಸಿದ್ದಾರೆ.

ಅದೇ ಸಮಯದಲ್ಲಿ, ರನ್ನರ್ ಅಪ್ 800,000 ಯುಎಸ್ ಡಾಲರ್ (5.85 ಕೋ.ರೂ.) ಸ್ವೀಕರಿಸಲಿದೆ. ಒಂದು ವೇಳೆ, ಪಂದ್ಯದ ಫಲಿತಾಂಶವು  ಡ್ರಾದಲ್ಲಿ ಕೊನೆಗೊಂಡರೆ ವಿಜೇತ ಬಹುಮಾನದ ಮೊತ್ತವನ್ನು ಸಮಾನವಾಗಿ ಹಂಚಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News