ದಿಗ್ಬಂಧನ ತೆರವಿಗೆ ಅಮೆರಿಕದೊಂದಿಗೆ ವಿಸ್ತತ ಒಪ್ಪಂದ: ಇರಾನ್

Update: 2021-06-14 15:38 GMT

ಟೆಹರಾನ್ (ಇರಾನ್), ಜೂ. 14: ಇಂಧನ ಸೇರಿದಂತೆ ಕೈಗಾರಿಕಾ ಕ್ಷೇತ್ರಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನಗಳನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿ ಆ ದೇಶದೊಂದಿಗೆ ವ್ಯಾಪಕ ತಳಹದಿಯ ಒಪ್ಪಂದವೊಂದಕ್ಕೆ ಬರಲಾಗಿದೆ ಎಂದು ಇರಾನ್ ಹೇಳಿದೆ. ಆದರೆ, 2015ರ ಪರಮಾಣು ಒಪ್ಪಂದಕ್ಕೆ ಮರುಜೀವ ನೀಡಲು ಪ್ರಭಾವಿ ದೇಶಗಳಿಗೆ ‘ತುಂಬಾ ಸ್ವಲ್ಪ ಸಮಯ ಉಳಿದಿದೆ’ ಎಂದು ಅದು ಎಚ್ಚರಿಸಿದೆ.

ಆದರೆ, ವ್ಯಾಪಾರ ನಿರ್ಬಂಧಗಳನ್ನು ಸಡಿಲಗೊಳಿಸುವುದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಇರಾನ್ ವಿದೇಶ ಸಚಿವಾಲಯದ ವಕ್ತಾರ ಸಯೀದ್ ಖತೀಬ್‌ಝಾದೇ ನೀಡಲಿಲ್ಲ. ಈ ನಿರ್ಬಂಧಗಳಿಂದಾಗಿ ಇರಾನ್‌ಗೆ ತನ್ನ ತೈಲವನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಆ ದೇಶದ ಆರ್ಥಿಕತೆ ನಿರ್ನಾಮವಾಗಿದೆ.

ಈ ಮಹತ್ವದ ಒಪ್ಪಂದದಲ್ಲಿ ಇನ್ನೂ ಹಲವಾರು ಜಿಗುಟು ವಿಷಯಗಳು ಇರುವುದರಿಂದ ಅದರ ಜಾರಿಯಲ್ಲಿ ವಿಳಂಬವಾಗುತ್ತಿದೆ ಎಂದು ಸೋಮವಾರ ಟೆಹರಾನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News