ಸಂಘರ್ಷದ ‘ಕೆಟ್ಟ ಅವಧಿ’ಯೊಂದರ ಕೊನೆ: ಫೆಲೆಸ್ತೀನ್ ಪ್ರಧಾನಿ

Update: 2021-06-14 15:56 GMT

photo:twitter /@DrShtayyeh

ರಮಲ್ಲಾ (ಫೆಲೆಸ್ತೀನ್), ಜೂ. 14: ಇಸ್ರೇಲ್ ಪ್ರಧಾನಿ ಹುದ್ದೆಯಿಂದ ಬೆಂಜಮಿನ್ ನೆತನ್ಯಾಹು ಕೆಳಗಿಳಿಯುವುದರೊಂದಿಗೆ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ‘ಅತ್ಯಂತ ಕೆಟ್ಟ ಅವಧಿ’ಯೊಂದು ಕೊನೆಗೊಂಡಿದೆ ಎಂದು ಫೆಲೆಸ್ತೀನ್ ಪ್ರಧಾನಿ ಮುಹಮ್ಮದ್ ಶ್ತಾಯಿಹ್ ಸೋಮವಾರ ಹೇಳಿದ್ದಾರೆ.

‘‘12 ವರ್ಷಗಳ ಅಧಿಕಾರದ ಬಳಿಕ ಇಸ್ರೇಲ್ ಪ್ರಧಾನಿಯ ನಿರ್ಗಮನದೊಂದಿಗೆ ಇಸ್ರೇಲಿ-ಫೆಲೆಸ್ತೀನ್ ಸಂಘರ್ಷದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅವಧಿಯೊಂದು ಕೊನೆಗೊಂಡಿದೆ’’ ಎಂದು ಫೆಲೆಸ್ತೀನ್ ಪ್ರಾಧಿಕಾರದ ವಾರದ ಸಚಿವ ಸಂಪುಟ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಹಮ್ಮದ್ ಶ್ತಾಯಿಹ್ ಹೇಳಿದರು.

ಆದರೆ, ಹೊಸ ಸರಕಾರದ ಬಗ್ಗೆ ಅಥವಾ ಅದು ಫೆಲೆಸ್ತೀನೀಯರೊಂದಿಗೆ ಶಾಂತಿ ಒಪ್ಪಂದಕ್ಕೆ ಮುಂದಾಗುತ್ತದೆ ಎಂಬ ಬಗ್ಗೆ ನನಗೆ ಯಾವ ಭ್ರಮೆಯೂ ಇಲ್ಲ ಎಂದೂ ಅವರು ಹೇಳಿದ್ದಾರೆ.

‘‘ಈ ಹೊಸ ಸರಕಾರ ಹಿಂದಿನ ಸರಕಾರಕ್ಕಿಂತ ಕಡಿಮೆ ಕೆಟ್ಟದಾಗಿದೆ ಎಂಬುದಾಗಿ ನಾವು ಭಾವಿಸುವುದಿಲ್ಲ. ಆಕ್ರಮಿತ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇಸ್ರೇಲಿ ಬಡಾವಣೆಗಳ ಪರವಾಗಿ ನೂತನ ಪ್ರಧಾನಿ ನಫ್ತಾಲಿ ಬೆನೆಟ್ ನೀಡಿರುವ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ’’ ಎಂದು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಕೈಗೆತ್ತಿಕೊಂಡಿರುವ ನಿರ್ಮಾಣ ಚಟುವಟಿಕೆಗಳನ್ನು ಉಲ್ಲೇಖಿಸುತ್ತಾ ಫೆಲೆಸ್ತೀನ್ ಪ್ರಧಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News