ಅಫ್ಘಾನಿಸ್ತಾನ: ಪೋಲಿಯೊ ಲಸಿಕೆ ಸಿಬ್ಬಂದಿಯ ಮೇಲೆ ದಾಳಿ; 4 ಸಾವು

Update: 2021-06-15 17:32 GMT

ಜಲಾಲಾಬಾದ್ (ಅಫ್ಘಾನಿಸ್ತಾನ), ಜೂ. 15: ಪೂರ್ವ ಅಫ್ಘಾನಿಸ್ತಾನದಲ್ಲಿ ಪೋಲಿಯೋ ಲಸಿಕೆ ನೀಡುವ ಆರೋಗ್ಯ ಸಿಬ್ಬಂದಿಯ ಮೇಲೆ ಮಂಗಳವಾರ ದಾಳಿ ನಡೆಸಿದ ಬಂದೂಕುಧಾರಿಗಳು ಕನಿಷ್ಠ ನಾಲ್ವರನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರೆ.

ಜಲಾಲಾಬಾದ್ ನಗರದಲ್ಲಿ ನಡೆಸಿರುವ ದಾಳಿಗೆ ಯಾವುದೇ ಗುಂಪು ಹೊಣೆಯನ್ನು ಹೊತ್ತುಕೊಂಡಿಲ್ಲ.

ದಾಳಿಯಲ್ಲಿ ಪೋಲಿಯೋ ಲಸಿಕಾ ತಂಡಗಳ ಕನಿಷ್ಠ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೂರ್ವ ಅಫ್ಘಾನಿಸ್ತಾನದಲ್ಲಿ ಪೋಲಿಯೊ ನಿಗ್ರಹ ಅಭಿಯಾನದ ಉಸ್ತುವಾರಿ ಹೊತ್ತಿರುವ ಡಾ. ಜನ್ ಮುಹಮ್ಮದ್ ತಿಳಿಸಿದ್ದಾರೆ.

ಈಗ ಜಗತ್ತಿನಲ್ಲಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಮಾತ್ರ ಪೋಲಿಯೊ ಕಾಯಿಲೆ ಉಳಿದಿದೆ. ಕಳೆದ ವರ್ಷ ನೈಜೀರಿಯವನ್ನು ಪೋಲಿಯೊಮುಕ್ತ ಎಂಬುದಾಗಿ ಘೋಷಿಸಲಾಗಿತ್ತು. ಜಲಾಲಾಬಾದ್ ನಗರದಲ್ಲೇ ಮಾರ್ಚ್ನಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಯು ಪೋಲಿಯೊ ಲಸಿಕಾ ತಂಡದ ಮೂವರು ಮಹಿಳೆಯರನ್ನು ಗುಂಡು ಹಾರಿಸಿ ಕೊಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News