ಇರಾನಿಯರನ್ನು ‘ಮುಕ್ತ ಮತ್ತು ನ್ಯಾಯೋಚಿತ’ ಚುನಾವಣೆಯಿಂದ ವಂಚಿಸಲಾಗಿದೆ: ಅಮೆರಿಕ

Update: 2021-06-20 17:21 GMT

ವಾಶಿಂಗ್ಟನ್, ಜೂ. 20: ಇರಾನ್‌ನಲ್ಲಿ  ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ‘ಮುಕ್ತ ಮತ್ತು ನ್ಯಾಯೋಚಿತ ಚುನಾವಣಾ ಪ್ರಕ್ರಿಯೆ’ಯಲ್ಲಿ ಭಾಗವಹಿಸಲು ಇರಾನಿಯನ್ನರಿಗೆ ಸಾಧ್ಯವಾಗದಿರುವುದಕ್ಕಾಗಿ ವಿಷಾದವಾಗುತ್ತಿದೆ ಎಂದು ಅಮೆರಿಕ ಶನಿವಾರ ಹೇಳಿದೆ.

ಇರಾನ್ನ ನೂತನ ಅಧ್ಯಕ್ಷರಾಗಿ ಧರ್ಮಗುರು ಇಬ್ರಾಹೀಮ್ ರೈಸಿ ಆಯ್ಕೆಯಾಗಿರುವುದಕ್ಕೆ ಅಮೆರಿಕ ಈ ರೀತಿಯಾಗಿ ಪ್ರತಿಕ್ರಿಯಿಸಿದೆ. ‘‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮದೇ ನಾಯಕರನ್ನು ಆಯ್ಕೆ ಮಾಡುವ ಇರಾನ್ ಜನತೆಯ ಹಕ್ಕನ್ನು ನಿರಾಕರಿಸಲಾಗಿದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೋರ್ವರು ಹೇಳಿದ್ದಾರೆ.

ಆದರೂ, 2015ರ ಇರಾನ್ ಪರಮಾಣು ಒಪ್ಪಂದಕ್ಕೆ ಅಮೆರಿಕ ಮತ್ತೆ ಸೇರ್ಪಡೆಯಾಗುವ ವಿಷಯದಲ್ಲಿ ನಡೆಯುತ್ತಿರುವ ಪರೋಕ್ಷ ಮಾತುಕತೆಗಳನ್ನು ಅಮೆರಿಕ ಮುಂದುವರಿಸುವುದು ಎಂದು ಅವರು ಹೇಳಿದರು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಅಮೆರಿಕವನ್ನು ಹೊರತಂದಿದ್ದರು.

ಇರಾನ್ ಚುನಾವಣೆಯಲ್ಲಿ ಹಲವು ರಾಜಕೀಯ ನಾಯಕರಿಗೆ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸಲಾಗಿತ್ತು. ನೂತನ ಅಧ್ಯಕ್ಷರು ಇರಾನ್ ಪರಮೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈಗೆ ಆಪ್ತರಾಗಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News