ಪತ್ರಕರ್ತೆ ರಾಣಾ ಅಯ್ಯೂಬ್ ಗೆ ನಿರೀಕ್ಷಣಾ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

Update: 2021-06-21 10:55 GMT

ಹೊಸದಿಲ್ಲಿ: ಗಾಝಿಯಾಬಾದ್ ನಲ್ಲಿ ವೃದ್ದರೊಬ್ಬರ ಮೇಲೆ ಗುಂಪೊಂದು ದಾಳಿ  ನಡೆಸಿರುವ ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದಕ್ಕೆ ಉತ್ತರಪ್ರದೇಶ ಪೊಲೀಸರು ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ದಾಖಲಿಸಿರುವ ಎಫ್ ಐ ಆರ್ ಗೆ ಸಂಬಂಧಪಟ್ಟಂತೆ ಬಾಂಬೆ ಹೈಕೋರ್ಟ್ ಸೋಮವಾರ ಅಯ್ಯೂಬ್ ಅವರಿಗೆ 4 ವಾರಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸಲು ಸಾಧ್ಯವಾಗಲು ಅಯ್ಯೂಬ್ ಗೆ ನಾಲ್ಕು ವಾರಗಳ ರಕ್ಷಣೆಯನ್ನು ನೀಡಬಹುದು ಎಂದು ಜಸ್ಟಿಸ್ ಪಿ.ಡಿ. ನಾಯಕ್ ಅವರಿದ್ದಏಕ ಸದಸ್ಯ ನ್ಯಾಯಪೀಠ ಆದೇಶಿಸಿದೆ.

ರಾಣಾ ಅಯ್ಯೂಬ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮಿಹಿರ್ ದೇಸಾಯಿ, ರಾಣಾ ಅಯ್ಯೂಬ್ ಅವರು ಅಂತರ್ ರಾಷ್ಟ್ರೀಯ ಖ್ಯಾತಿಯ ಪತ್ರಕರ್ತರಾಗಿದ್ದು, ತಮ್ಮ ಕೆಲಸಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗಾಝಿಯಾಬಾದ್ ನಲ್ಲಿ ಮುಸ್ಲಿಂ ವೃದ್ಧರೊಬ್ಬರಿಗೆ ಗುಂಪೊಂದು ದಾಳಿ ನಡೆಸುತ್ತಿರುವ ಕುರಿತ ವರದಿಗಳನ್ನು ಆಧರಿಸಿ ರಾಣಾ ಟ್ವೀಟ್ ಮಾಡಿದ್ದರು ಎಂದು ಹೇಳಿದ್ದಾರೆ.

ಅಯ್ಯೂಬ್ ಟ್ವೀಟನ್ನು ಅಳಿಸಿಹಾಕಿದ್ದಾರೆ. ಅವರು ಇತ್ತೀಚೆಗೆ ಬೆನ್ನೆಲುಬು  ಸರ್ಜರಿಗೆ ಒಳಗಾಗಿದ್ದು, ಉತ್ತರಪ್ರದೇಶದ ನ್ಯಾಯಾಲಯವನ್ನು ಸಂಪರ್ಕಿಸಲು 3-4 ವಾರಗಳ ಅಗತ್ಯವಿದೆ. ಎಫ್ ಐಆರ್ ನಲ್ಲಿ ನಮೂದಿಸಲಾಗಿರುವ ಅಪರಾಧಗಳೆಲ್ಲವೂ ಕನಿಷ್ಠ 3 ವರ್ಷದ ಶಿಕ್ಷೆಗೆ ಒಳಪಡಿಸುತ್ತವೆ ಎಂದು ದೇಸಾಯಿ ಬೆಟ್ಟು ಮಾಡಿದರು.

ಉತ್ತರಪ್ರದೇಶ ಪೊಲೀಸರು ತನ್ನ ಹಾಗೂ ಇತರ 8 ಮಂದಿ ಹಾಗೂ ಟ್ವಿಟರ್ ಸಂಸ್ಥೆಯ ವಿರುದ್ಧ ಎಫ್ ಐ ಆರ್ ದಾಖಲಿಸಿದ ಬಳಿಕ ಅಯ್ಯೂಬ್ ಅವರು ನಿರೀಕ್ಷಣಾ ಜಾಮೀನು ಕೋರಿ ಜೂನ್ 18ರಂದು ನ್ಯಾಯಾಲಯವನ್ನು ಸಂಪರ್ಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News