ಅತಿ ಹೆಚ್ಚು ಮಕ್ಕಳಿರುವ ಪೋಷಕರಿಗೆ 1 ಲಕ್ಷ ರೂ. ನಗದು ಘೋಷಿಸಿದ ಮಿಝೋರಾಂ ಸಚಿವ

Update: 2021-06-21 18:07 GMT
photo: twitter

ಐಝಾಲ್: ಸಣ್ಣ ಮಿಝೊ ಸಮುದಾಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸಲು ಮಿಝೋರಾಂ ಸಚಿವರೊಬ್ಬರು ತಮ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಜೀವಂತ ಪೋಷಕರಿಗೆ  1 ಲಕ್ಷ ರೂ.ನಗದು ಪ್ರೋತ್ಸಾಹವನ್ನು ಘೋಷಿಸಿದ್ದಾರೆ.

ಈ ಬಹುಮಾನವನ್ನು ಘೋಷಿಸಿರುವ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಕನಿಷ್ಠ ಮಕ್ಕಳ ಸಂಖ್ಯೆಯನ್ನು ಉಲ್ಲೇಖಿಸಿಲ್ಲ.

ಭಾರತದ ಹಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಪ್ರತಿ ಪಾದಿಸುತ್ತಿರುವ ಸಮಯದಲ್ಲಿ ಈ ಘೋಷಣೆ ಬಂದಿದೆ.

ರವಿವಾರ ಫಾದರ್ಸ್ ಡೇ  ಸಂದರ್ಭದಲ್ಲಿ, ರಾಯ್ಟೆ ಅವರು ತಮ್ಮ ಐಜಾಲ್ ಈಸ್ಟ್ -2 ವಿಧಾನಸಭಾ ಕ್ಷೇತ್ರದೊಳಗೆ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಜೀವಂತ ಪುರುಷ ಅಥವಾ ಮಹಿಳೆಗೆ ರೂ. 1 ಲಕ್ಷ ನಗದು ಪ್ರೋತ್ಸಾಹದೊಂದಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.

ವ್ಯಕ್ತಿಗೆ ಪ್ರಮಾಣಪತ್ರ ಮತ್ತು ಟ್ರೋಫಿ ಕೂಡ ಸಿಗಲಿದೆ ಎಂದು ಸಚಿವರು ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News