ಕೋವಿಡ್‌ ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸದ ಪ್ರಧಾನಿ ಬಂಗಾಳ ಚುನಾವಣೆಯಲ್ಲಿ ವ್ಯಸ್ತರಾಗಿದ್ದರು: ರಾಹುಲ್‌ ಟೀಕೆ

Update: 2021-06-22 08:57 GMT

ಹೊಸದಿಲ್ಲಿ: "ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಅವರ ಗಮನವೆಲ್ಲಾ ಬಂಗಾಳ ಚುನಾವಣೆಯಲ್ಲಿ ಕೇಂದ್ರೀಕೃತವಾಗಿತ್ತು" ಎಂದು ಇಂದು ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

"ಕೋವಿಡ್ ಎರಡನೇ ಅಲೆಯಲ್ಲಿ ಶೇ90ರಷ್ಟು ಸಾವುಗಳು ಆಕ್ಸಿಜನ್ ಕೊರತೆಯಂತಹ ಅನಗತ್ಯ ಕಾರಣಗಳಿಂದಾಗಿ ಉಂಟಾದವು. ಪ್ರಧಾನಿಯ ಕಣ್ಣೀರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ಕಡಿಮೆ ಮಾಡುವುದಿಲ್ಲ" ಎಂದ ರಾಹುಲ್ ಹೇಳಿದರು.

ಕೇಂದ್ರ ಸರಕಾರ ಕೋವಿಡ್ ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿಯ ಕುರಿತಾದ ಶ್ವೇತಪತ್ರವನ್ನೂ ರಾಹುಲ್ ಬಿಡುಗಡೆಗೊಳಿಸಿದರು. ಈ ಶ್ವೇತಪತ್ರದ ಉದ್ದೇಶ ಸರಕಾರವನ್ನು ಟೀಕಿಸುವುದಾಗಿಲ್ಲ, ಬದಲು ಸಂಭಾವ್ಯ ಮೂರನೇ ಕೋವಿಡ್ ಅಲೆಗೆ ದೇಶವನ್ನು ಸನ್ನದ್ಧಗೊಳಿಸಲು ಸಹಾಯ ಮಾಡುವ ಉದ್ದೇಶ ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಏನು ತಪ್ಪು ನಡೆದಿದೆ ಎಂಬ ಕುರಿತು ಸರಕಾರಕ್ಕೆ ಮಾಹಿತಿ ನೀಡುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News