2.14 ಕೋಟಿಗೂ ಅಧಿಕ ಡೋಸ್ ಲಸಿಕೆ ರಾಜ್ಯಗಳ ಬಳಿಯಿದೆ: ಕೇಂದ್ರ ಸರಕಾರ

Update: 2021-06-22 18:23 GMT

ಹೊಸದಿಲ್ಲಿ, ಜೂ.22: ಸುಮಾರು 2.14 ಕೋಟಿ ಡೋಸ್ ಲಸಿಕೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿಯಿದ್ದು, ಮುಂದಿನ ಮೂರು ದಿನದೊಳಗೆ ಇನ್ನೂ 33,80,590 ಡೋಸ್ ಲಸಿಕೆ ಇವುಗಳ ಕೈಸೇರಲಿದೆ ಎಂದು ಕೇಂದ್ರದ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.

ಒಂದೇ ದಿನ ಭಾರತದಲ್ಲಿ 88.16 ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದು, ಇದು ವಿಶ್ವದಲ್ಲೇ ದಾಖಲೆಯಾಗಿದೆ. ರಾಷ್ಟ್ರವ್ಯಾಪಿ ಲಸಿಕೀಕರಣ ಅಭಿಯಾನದಡಿ ಇದುವರೆಗೆ ಒಟ್ಟು 28.87 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ 29.35 ಕೋಟಿ ಡೋಸ್ ಲಸಿಕೆ ಒದಗಿಸಲಾಗಿದೆ. ಇದರಲ್ಲಿ ವ್ಯರ್ಥ ಸೇರಿದಂತೆ 27,20,14,523 ಡೋಸ್ ಲಸಿಕೆ ಬಳಸಲಾಗಿದೆ. 2.14 ಕೋಟಿ ಲಸಿಕೆ ಇನ್ನೂ ಉಳಿದಿದೆ ಎಂದು ಇಲಾಖೆ ಹೇಳಿದೆ. ಭಾರತದಲ್ಲಿ ಮತ್ತೊಂದು ಹಂತದ ಲಸಿಕೀಕರಣ ಅಭಿಯಾನ ಜೂ.21ರಿಂದ ಆರಂಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News