ಇರಾನ್ ಕ್ಷಿಪಣಿ ಯೋಜನೆ ವಿಫಲ?: ಅಮೆರಿಕ ಅಧಿಕಾರಿಯ ಹೇಳಿಕೆ

Update: 2021-06-23 17:06 GMT

ದುಬೈ, ಜೂ.23: ಇರಾನ್ ಕೆಲ ದಿನಗಳ ಹಿಂದೆ ಉಪಗ್ರಹ ಸಾಗಿಸುವ ಕ್ಷಿಪಣಿ ಉಡ್ಡಯನದ ವಿಫಲ ಯತ್ನ ನಡೆಸಿರುವ ಸಾಧ್ಯತೆಯಿದೆ ಮತ್ತು ಮುಂದಿನ ದಿನಗಳಲ್ಲಿ ಮತ್ತೊಂದು ಪ್ರಯತ್ನ ನಡೆಸಲು ಸಿದ್ಧತೆ ನಡೆಸುತ್ತಿರುವಂತೆ ಕಾಣುತ್ತದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇರಾನ್ನ ಸೆಮ್ನಾನ್ ಪ್ರಾಂತ್ಯದ ಇಮಾಮ್ ಖೊಮೇನಿ ಬಾಹ್ಯಾಕೇಶ ಕೇಂದ್ರದಿಂದ ಈ ತಿಂಗಳ ಆರಂಭದಲ್ಲಿ ಈ ವಿಫಲ ಉಡ್ಡಯನ ನಡೆಸಲಾಗಿರುವ ಬಗ್ಗೆ ಉಪಗ್ರಹದಿಂದ ಲಭ್ಯ ಫೋಟೋಗಳಿಂದ ಮಾಹಿತಿ ದೊರೆತಿದೆ. ಬಾಹ್ಯಾಕಾಶ ಯೋಜನೆಯಲ್ಲಿ ಸರಣಿ ವೈಫಲ್ಯದಿಂದ ಕಂಗೆಟ್ಟಿರುವ ಇರಾನ್, ಈಗ ಸದ್ದಿಲ್ಲದೆ ಮತ್ತೊಂದು ಕ್ಷಿಫನಿ ಉಡಾವಣೆ ಯೋಜನೆಗೆ ಸಿದ್ಧತೆ ನಡೆಸುತ್ತಿರುವಂತೆ ಕಾಣುತ್ತದೆ ಎಂದವರು ಹೇಳಿದ್ದಾರೆ. ಇರಾನ್ನ ಅರೆಸೇನಾ ಪಡೆಯಾದ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ತನ್ನದೇ ಆದ ಉಪಗ್ರಹ ಯೋಜನೆ ಹೊಂದಿದ್ದು ಕಳೆದ ವರ್ಷ ಒಂದು ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಹಾರಿಸಿದೆ.

ಈ ಹಿಂದಿನಂತೆಯೇ, ಈ ಬಾರಿಯೂ ಕ್ಷಿಪಣಿ ಉಡ್ಡಯನ ಯೋಜನೆಯ ವೈಫಲ್ಯವನ್ನು ಇರಾನ್ ಆಡಳಿತ ಒಪ್ಪಿಕೊಂಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆಯಲ್ಲಿನ ಇರಾನ್ ನಿಯೋಗ ನಿರಾಕರಿಸಿದೆ ಎಂದು ಮೂಲಗಳು ಹೇಳಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News