150 ಬಿಜೆಪಿ ಕಾರ್ಯಕರ್ತರು ಟಿಎಂಸಿಗೆ ಮರು ಸೇರ್ಪಡೆ

Update: 2021-06-24 17:16 GMT

ಬಿರ್ಭೂಮ್, ಜೂ. 24: 150 ಬಿಜೆಪಿ ಕಾರ್ಯಕರ್ತರ ಇನ್ನೊಂದು ಗುಂಪು ಬಿರ್ಭೂಮ್ನಲ್ಲಿ ‘ಶುದ್ಧೀಕರಣದ ಆಚರಣೆ’ ಬಳಿಕ ಟಿಎಂಸಿಗೆ ಸೇರ್ಪಡೆಯಾಗಿದೆ. ಪಶ್ಚಿಮಬಂಗಾಳದ ಬಿರ್ಭೂಮ್ನಲ್ಲಿ ಟಿಎಂಸಿ ಸೇರುವ ಮುನ್ನ ಬಿಜೆಪಿ ಕಾರ್ಯಕರ್ತರು ‘ಬಿಜೆಪಿ ವೈರಸ್’ ಅನ್ನು ನಾಶಪಡಿಸಲು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಬಿರ್ಭೂಮ್ನ ಇಲ್ಲಂಬಝಾರ್ ಬ್ಲಾಕ್ನಲ್ಲಿ ನಡೆದಿದೆ. ಈ ಬಿಜೆಪಿ ಕಾರ್ಯಕರ್ತರಲ್ಲಿ ‘ಬಿಜೆಪಿ ವೈರಸ್’ ಇದೆ. ಆದುದರಿಂದ ಅವರು ಸ್ಯಾನಿಟೈಸರ್ ಹಾಕಿ ಶುದ್ದೀಕರಣಗೊಂಡಿದ್ದಾರೆ ಎಂದು ಟಿಎಂಸಿಯ ಸ್ಥಳೀಯ ನಾಯಕರೋರ್ವರು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರು ವೇಗವಾಗಿ ನಡೆದುಕೊಂಡು ಹೋಗುವ ಸಂದರ್ಭ ಟಿಎಂಸಿಯ ಸ್ಥಳೀಯ ನಾಯಕರು ಸ್ಯಾನಿಟೈಸೇಶನ್ ಉಪಕರಣದ ಮೂಲಕ ಸೋಂಕು ನಿವಾರಕವನ್ನು ಸಿಂಪಡಿಸಿದರು. ಬಿರ್ಭೂಮ್ನಲ್ಲಿ ನಡೆದ ಟಿಎಂಸಿ ಕಾರ್ಯಕ್ರಮದಲ್ಲಿ ಈ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಟಿಎಂಸಿಯ ಸ್ಥಳೀಯ ನಾಯಕರು ಕೂಡ ಪಾಲ್ಗೊಂಡಿದ್ದರು.

ಈ ಹಿಂದೆ ಹೂಗ್ಲಿ ಜಿಲ್ಲೆಯಲ್ಲಿ 200 ಬಿಜೆಪಿ ಕಾರ್ಯಕರ್ತರು ತಮ್ಮ ತಲೆ ಬೋಳಿಸಿ ಹಾಗೂ ಗಂಗಾಜಲ ಸಿಂಪಡಿಸಿ ಟಿಎಂಸಿ ಸೇರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News