×
Ad

ಉತ್ತರ ಪ್ರದೇಶ: 2.5 ಕೋಟಿ ರೂ.ಬೆಲೆಬಾಳುವ ಅಪರೂಪದ ಹಾವು ರಕ್ಷಣೆ, ನಾಲ್ವರ ಸೆರೆ

Update: 2021-06-25 13:30 IST

ಲಕ್ನೋ: ಬಲರಾಂಪುರ್ ಜಿಲ್ಲೆಯಲ್ಲಿ ಗುರುವಾರ ಸಂಜೆ ರೆಡ್ ಸ್ಯಾಂಡ್ ಬೋವಾ ಹಾವನ್ನುರಕ್ಷಿಸಲಾಗಿದ್ದು, ಇದನ್ನು  ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನುಬಂಧಿಸಲಾಗಿದೆ.

ರೆಡ್ ಸ್ಯಾಂಡ್ ಬೋವಾ ಎಂಬುದು ಅಪರೂಪದ ವಿಷಕಾರಿಯಲ್ಲದ ಹಾವು. ಇದನ್ನು ಕೆಲವು ಔಷಧಿಗಳು, ಸೌಂದರ್ಯವರ್ಧಕಗಳನ್ನು ತಯಾರಿಸಲು  ಹಾಗೂ ಮಾಟಮಂತ್ರಗಳಲ್ಲಿ ಬಳಸಲಾಗುತ್ತದೆ, ಆದ್ದರಿಂದ ಇದಕ್ಕೆ ಜಾಗತಿಕವಾಗಿ ಭಾರೀ ಬೇಡಿಕೆಯಿದೆ ಹಾಗೂ  ಕೋಟಿ ರೂಪಾಯಿಗಳ ಬೆಲೆ ಇದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ರೆಡ್ ಸ್ಯಾಂಡ್ ಬೋವಾ ಹಾವು ಅಪರೂಪದ ಹಾವಿನ ಪ್ರಭೇದವಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ 2.5 ಕೋಟಿ ರೂಪಾಯಿಗಳ ಬೆಲೆ ಇದೆ ಎಂದು ಬಲರಾಂಪುರ ಜಿಲ್ಲಾ ಅರಣ್ಯ ಅಧಿಕಾರಿ ಪ್ರಖರ್ ಗುಪ್ತಾ ತಿಳಿಸಿದ್ದಾರೆ.

ಬಂಧಿತರನ್ನು ಸದನ್ ಕುಮಾರ್, ಗೋವಿಂದ್ ನಾಥ್ ಪಾಂಡೆ, ಬಾಬರ್ ಖಾನ್, ವಿಶಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ರೆಡ್ ಸ್ಯಾಂಡ್ ಬೋವಾ ಹಾವನ್ನು ಬಚ್ಚಿಟ್ಟಿದ್ದ ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News