×
Ad

ಫ್ಲೋರಿಡಾದಲ್ಲಿ ಕಟ್ಟಡ ಸಂಕೀರ್ಣ ಕುಸಿತ: ಅವಶೇಷಗಳಡಿ 159 ಮಂದಿ ; 4 ಶವ ಪತ್ತೆ

Update: 2021-06-27 00:11 IST

ವಾಶಿಂಗ್ಟನ್,ಜೂ.26: ಅಮೆರಿಕದ ಫ್ಲೋರಿಡಾ ರಾಜ್ಯದ ಮಿಯಾಮಿ ನಗರದ ಕಡಲತೀರದ ಸಮೀಪದಲ್ಲಿರುವ ಬೃಹತ್ ಕಟ್ಟಡ ಸಮುಚ್ಚಯದ ಒಂದು ಭಾಗ ಶುಕ್ರವಾರ ಕುಸಿದುಬಿದ್ದು, 159ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈವರೆಗೆ ನಾಲ್ವರ ಶವಗಳನ್ನು ಪತ್ತೆಹಚ್ಚಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಮಿಯಾಮಿ ನಗರದ ಸರ್ಫ್ಸೈಡ್ ಪ್ರದೇಶದಲ್ಲಿರುವ ಶಾಂಪ್ಲೇನ್ ಟವರ್ಸ್ ಸೌತ್ ಎಂಬ ಹೆಸರಿನ ಕಟ್ಟಡ ಸಂಕೀರ್ಣ ಶುಕ್ರವಾರ ನಸುಕಿನಲ್ಲಿ 1:30ಗಂಟೆಯ ವೇಳೆಗೆ ಕುಸಿದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಸುಮಾರು 130 ವಸತಿಗಳಿರುವ ಈ ಸಮುಚ್ಚಯದಲ್ಲಿ ವಿವಿಧ ದೇಶಗಳ ಪ್ರಜೆಗಳು ವಾಸವಾಗಿದ್ದರೆಂದು ಅವು ಹೇಳಿವೆ. ಕಟ್ಟಡದಲ್ಲಿ ದುರಸ್ತಿಕಾರ್ಯಗಳನ್ನು ಕೂಡಾ ನಡೆಯುತ್ತಿದ್ದುದಾಗಿ ವರದಿಯಾಗಿದೆ.

ಕಟ್ಟಡದ ಹಾನಿಯಾಗದೆ ಉಳಿದ ಭಾಗಗಳಲ್ಲಿ ನೆಲೆಸಿರುವವರನ್ನು ತೆರವುಗೊಳಿಸಲಾಗಿದೆ. ಕಟ್ಟಡದ ಕುಸಿದುಬಿದ್ದ ಭಾಗದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವವರನ್ನು ಹೊರತರಲು ರಕ್ಷಣಾ ಕಾರ್ಯಾಚರ ಆರಂಭಗೊಂಡಿದೆ. ಇದೇ ವೇಳೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿರುವುದಾಗಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News