ಆನ್‌ಲೈನ್ ತರಗತಿಗಳಿಗೆ ಫೋನ್ ಖರೀದಿಸಲು 1.2 ಲಕ್ಷ ರೂ.ಗೆ ಡಝನ್ ಮಾವಿನಹಣ್ಣು ಮಾರಾಟ ಮಾಡಿದ ಬಾಲಕಿ!

Update: 2021-06-30 14:46 GMT
Photo: PTI

ಜಮ್ಶೆಡ್ಪುರ (ಜಾರ್ಖಂಡ್): ಜಾರ್ಖಂಡ್‌ನ ಜಮ್ಶೆಡ್ಪುರದ 11ರ ವಯಸ್ಸಿನ ಬಾಲಕಿ ತುಳಸಿ ಕುಮಾರಿ ತಲಾ 10,000 ರೂ.ಗೆ ಒಂದು ಡಝನ್ ಮಾವಿನಹಣ್ಣು ಮಾರಾಟ ಮಾಡುವ ಮೂಲಕ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ತನ್ನ ಕನಸನ್ನು ಇತ್ತೀಚೆಗೆ ಈಡೇರಿಸಿಕೊಂಡಿದ್ದಾಳೆ.

ಮುಂಬೈ ಮೂಲದ ಉದ್ಯಮಿ ಅಮಯಾ ಹೆಟೆ ಎಂಬವರು ತುಳಸಿಯ ಬಗ್ಗೆ ತಿಳಿದುಕೊಂಡ ನಂತರ ಆಕೆಯ ಅಧ್ಯಯನ ಮಾಡುವ ದೃಢ ನಿರ್ಧಾರವನ್ನು ಹೆಚ್ಚಿಸಲು 12 ಮಾವಿನಹಣ್ಣುಗಳನ್ನು ತಲಾ ರೂ. 10,000 ಕ್ಕೆ ಖರೀದಿಸಲು ನಿರ್ಧರಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ತನ್ನ  ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ತನ್ನ  ಪೋಷಕರು ತನಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸ್ಮಾರ್ಟ್‌ಫೋನ್ ಖರೀದಿಸಿಕೊಡುವ ಸ್ಥಿತಿಯಲ್ಲಿರಲಿಲ್ಲ ಎಂದು ಎಎನ್ ಐಗೆ ತುಳಸಿಕುಮಾರಿ ತಿಳಿಸಿದರು.

"ನಾನು ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದ್ದೆ. ಆದರೆ ಮಾವಿನಹಣ್ಣಿನ ಮಾರಾಟ ದಿಂದ ನಾವು ಗಳಿಸಿದ ಎಲ್ಲಾ ಹಣವು ಕುಟುಂಬಕ್ಕೆ ಪಡಿತರವನ್ನು ಖರೀದಿಸಲು ಹೋಗುತ್ತಿತ್ತು. ನಂತರ ಒಬ್ಬ 'ಸರ್' ನನ್ನಿಂದ 12 ಮಾವಿನಹಣ್ಣುಗಳನ್ನು ತಲಾ ರೂ. 10,000 ಕ್ಕೆ ಖರೀದಿಸಿದರು. ಅವರು ನನಗೆ ಫೋನ್ ಕೂಡ ಖರೀದಿಸಿಕೊಟ್ಟರು " ಎಂದು ತುಳಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News